alex Certify BIG NEWS:‌ ರಿಲಯನ್ಸ್ ನಿರ್ದೇಶಕ ಮಂಡಳಿಗೆ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ನೇಮಕಕ್ಕೆ ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ರಿಲಯನ್ಸ್ ನಿರ್ದೇಶಕ ಮಂಡಳಿಗೆ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ನೇಮಕಕ್ಕೆ ಶಿಫಾರಸು

ambani family, reliance

ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪೆನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್) ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ.

ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿರುವ ಮಂಡಳಿ, ಈ ಮೂವರ ನೇಮಕಾತಿಗಾಗಿ ಅನುಮೋದನೆ ನೀಡಲು ಶಿಫಾರಸು ಮುಂದಿಟ್ಟಿದೆ. ಶೇರ್ ಹೋಲ್ಡರ್‌ಗಳ ಒಪ್ಪಿಗೆ ಬಳಿಕ ಅವರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ನೇಮಕಾತಿಯು ಜಾರಿಗೆ ಬರಲಿದೆ.

ರಿಲಯನ್ಸ್ ಫೌಂಡೇಷನ್ ಮತ್ತಷ್ಟು ದೊಡ್ಡ ಮಟ್ಟದ ಪರಿಣಾಮ ಉಂಟುಮಾಡಲು ಸಾಧ್ಯವಾಗುವಂತೆ ಬೆಳೆಸಲು ಹಾಗೂ ಮಾರ್ಗದರ್ಶನ ನೀಡಲು ತಮ್ಮ ಸಮಯವನ್ನು ಮೀಸಲಿಡಲು ಬಯಸಿರುವ ನೀತಾ ಅಂಬಾನಿ ಅವರ ನಿರ್ಧಾರವನ್ನು ಗೌರವಿಸಿರುವ ನಿರ್ದೇಶಕರ ಮಂಡಳಿಯು, ಅವರ ರಾಜೀನಾಮೆಯನ್ನು ಸ್ವೀಕರಿಸಿದೆ. ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರ ನಾಯಕತ್ವವನ್ನು ನಿರ್ದೇಶಕರ ಮಂಡಳಿ ಶ್ಲಾಘಿಸಿದೆ.

ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿ ನೀತಾ ಅಂಬಾನಿ ಅವರು ಆರ್‌ಐಎಲ್‌ನ ಎಲ್ಲಾ ಮಂಡಳಿ ಸಭೆಗಳಲ್ಲಿ ಕಾಯಂ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಇದರಿಂದ ಕಂಪೆನಿಯು ಅವರ ಸಲಹೆಗಳ ಪ್ರಯೋಜನ ಪಡೆಯುವುದನ್ನು ಮುಂದುವರಿಸಲು ನೆರವಾಗಲಿದೆ ಎಂದು ರಿಲಯನ್ಸ್ ಹೇಳಿಕೆ ತಿಳಿಸಿದೆ.

ರೀಟೇಲ್, ಡಿಜಿಟಲ್ ಸೇವೆಗಳು ಮತ್ತು ಸರಕು ವ್ಯವಹಾರಗಳು ಸೇರಿದಂತೆ ಆರ್‌ಐಎಲ್‌ನ ಪ್ರಮುಖ ವ್ಯವಹಾರಗಳನ್ನು ಮುನ್ನಡೆಸುವ ಹಾಗೂ ನಿರ್ವಹಿಸುವ ಕಾರ್ಯದಲ್ಲಿ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಐಎಲ್‌ನ ಪ್ರಮುಖ ಅಂಗ ಸಂಸ್ಥೆಗಳ ಮಂಡಳಿಗಳಲ್ಲಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆರ್‌ಐಎಲ್ ಮಂಡಳಿಗೆ ಅವರ ನೇಮಕಾತಿಯು, ಅವರ ದೃಷ್ಟಿಕೋನ ಮತ್ತು ಹೊಸ ಆಲೋಚನೆಗಳಿಂದ ಕಂಪೆನಿಯ ಉನ್ನತಿಗೆ ನೆರವಾಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...