ನವದೆಹಲಿ: ಭಾರತೀಯ ಕ್ರಿಕೆಟ್ ನ ಬ್ಯಾಟಿಂಗ್ ದಂತಕಥೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಋತುರಾಜ್ ಗಾಯಕ್ವಾಡ್ ನೇತೃತ್ವದ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
2018ರ ಏಷ್ಯಾಡ್ ಆವೃತ್ತಿಯಲ್ಲಿ ಕ್ರೀಡೆಯನ್ನು ಕಡೆಗಣಿಸಿದ ನಂತರ, ಇತಿಹಾಸದಲ್ಲಿ ಮೂರನೇ ಬಾರಿಗೆ ಕ್ರಿಕೆಟ್ ಏಷ್ಯನ್ ಕ್ರೀಡಾಕೂಟಕ್ಕೆ ಮರಳಿದೆ ಮತ್ತು ಭಾರತವು ಮೊದಲ ಬಾರಿಗೆ ತಮ್ಮ ಪುರುಷರ ತಂಡವನ್ನು ಕಳುಹಿಸಲಿದೆ.
ಏಷ್ಯನ್ ಗೇಮ್ಸ್ 2023 ರ ಕ್ರಿಕೆಟ್ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಮಹಿಳಾ ತಂಡವು ಕಣಕ್ಕಿಳಿಯಲಿದೆ. ಐಸಿಸಿ ರ್ಯಾಂಕಿಂಗ್ನಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್ ಹಂತದಿಂದಲೇ ಆರಂಭವಾಗಲಿದ್ದು, 26ರಂದು ಫೈನಲ್ ಪಂದ್ಯವನ್ನಾಡಲಿದೆ. ಪುರುಷರ ಈವೆಂಟ್ ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 7 ರಂದು ಫೈನಲ್ ಪಂದ್ಯ ನಡೆಯಲಿದೆ.
ವಿಶ್ವಕಪ್ ದೃಷ್ಟಿಯಿಂದ ಹಿರಿಯ ಆಟಗಾರರನ್ನು ಸೇರಿದಂತೆ ಟೀಂ ಇಂಡಿಯಾದ ಕೋಚಿಂಗ್ ಸಿಬ್ಬಂದಿಗಳು ಸಹ ಏಷ್ಯನ್ ಗೇಮ್ಸ್‌ಗೆ ಹೋಗುತ್ತಿಲ್ಲ. ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಸೇರಿದಂತೆ ಇತರ ಸಿಬ್ಬಂದಿಗಳು ಭಾರತ ಮುಖ್ಯ ತಂಡದೊಂದಿಗೆ ಇರಲಿದ್ದಾರೆ. ಹೀಗಾಗಿ ದ್ರಾವಿಡ್ ಅನುಪಸ್ಥಿತಿಯಲ್ಲಿ ಲಕ್ಷ್ಮಣ್ ಯುವ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2023 ರ ಏಷ್ಯನ್ ಗೇಮ್ಸ್‌ಗೆ ಮುಖ್ಯ ಕೋಚ್ ಆಗಿ ತಂಡದೊಂದಿಗೆ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.