ಪಿಜ್ಜಾ ಮೂಲತಃ ಇಟಲಿಯ ಆಹಾರ. ಆದರೆ ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಅದರ ಜನಪ್ರಿಯತೆಯು ಬಹಳಷ್ಟು ಹೆಚ್ಚಾಗಿದೆ. ಮಕ್ಕಳು, ಹಿರಿಯರು, ಯುವಕರು ಹೀಗೆ ಪ್ರತಿಯೊಬ್ಬರೂ ಪಿಜ್ಜಾವನ್ನು ಇಷ್ಟಪಡುತ್ತಿದ್ದಾರೆ. ಅನೇಕರಿಗೆ ಎಷ್ಟು ಪ್ರಯತ್ನಿಸಿದರೂ ಈ ಜಂಕ್ ಫುಡ್ ಬಗೆಗಿನ ಮೋಹ ಕಡಿಮೆಯಾಗುತ್ತಿಲ್ಲ. ಒಂದು ತಿಂಗಳು ಪಿಜ್ಜಾ ತಿನ್ನದಿದ್ದರೆ ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.
ಅನಾರೋಗ್ಯಕರ ಆಹಾರ – ಪಿಜ್ಜಾ ಒಂದು ಅನಾರೋಗ್ಯಕರ ಆಹಾರವಾಗಿದೆ, ಇದು ನಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಅದನ್ನು ಒಂದು ತಿಂಗಳು ಬಿಟ್ಟಾಗ ನಿಮ್ಮ ಡಯಟ್ನಲ್ಲಿ ಕೇವಲ ಆರೋಗ್ಯಕರ ಆಹಾರಗಳಿರುತ್ತವೆ.
ಬೊಜ್ಜು – ಪಿಜ್ಜಾ, ಎಣ್ಣೆ ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಒಂದು ತಿಂಗಳ ಕಾಲ ಪಿಜ್ಜಾವನ್ನು ಸೇವಿಸದೆ ಇದ್ದರೆ ಹೆಚ್ಚಿನ ಪ್ರಮಾಣದಲ್ಲಿ ತೂಕವನ್ನು ಕಳೆದುಕೊಳ್ಳಬಹುದು.
ಕೊಲೆಸ್ಟ್ರಾಲ್ ತಡೆಗಟ್ಟಬಹುದು – ದೀರ್ಘಕಾಲದವರೆಗೆ ಪಿಜ್ಜಾವನ್ನು ತಿನ್ನದಿದ್ದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಆರೋಗ್ಯ ಕೂಡ ಸುಧಾರಿಸುತ್ತದೆ.
ಬಿಪಿ ನಿಯಂತ್ರಣ – ಪಿಜ್ಜಾದಲ್ಲಿರುವ ಕೊಬ್ಬಿನಿಂದಾಗಿ ಅಧಿಕ ರಕ್ತದೊತ್ತಡದ ಬರಬಹುದು. ಆದ್ದರಿಂದ ಪಿಜ್ಜಾವನ್ನು ತ್ಯಜಿಸುವುದರಿಂದ ಖಂಡಿತವಾಗಿಯೂ ಬಿಪಿ ನಿಯಂತ್ರಣದಲ್ಲಿರುತ್ತದೆ.
ಹೃದಯ ಸಂಬಂಧಿ ಕಾಯಿಲೆ – ಪಿಜ್ಜಾದಲ್ಲಿರುವ ಮೊಝರೆಲ್ಲಾ ಚೀಸ್ ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪಿಜ್ಜಾ ಸೇವನೆ ಮಾಡದೇ ಇರುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ.
ಮಧುಮೇಹದ ಅಪಾಯ ಕಡಿಮೆಯಾಗುತ್ತದೆ – ಪಿಜ್ಜಾದಲ್ಲಿ ಕಾರ್ಬೋಹೈಡ್ರೇಟ್ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪಿಜ್ಜಾವನ್ನು ತ್ಯಜಿಸುವ ಮೂಲಕ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು.
ಜೀರ್ಣಕ್ರಿಯೆ ಸುಧಾರಣೆ – 30 ದಿನಗಳವರೆಗೆ ಪಿಜ್ಜಾವನ್ನು ತ್ಯಜಿಸಿದರೆ, ಜೀರ್ಣಕ್ರಿಯೆಯು ನಿಧಾನವಾಗಿ ಸುಧಾರಿಸಲು ಪ್ರಾರಂಭಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಚರ್ಮದ ಆರೋಗ್ಯ ಸುಧಾರಣೆ – ಹೆಚ್ಚು ಪಿಜ್ಜಾ ತಿನ್ನುವುದರಿಂದ ಚರ್ಮವು ಹೊಳಪು ಕಳೆದುಕೊಂಡು ಮಂದ ತ್ತು ನಿರ್ಜೀವವಾಗಿ ಕಾಣುತ್ತದೆ. ಒಂದು ತಿಂಗಳು ಪಿಜ್ಜಾ ತಿನ್ನದೇ ಇದ್ದರೆ ನಿಮ್ಮ ತ್ವಚೆಯನ್ನು ಸುಧಾರಿಸಬಹುದು.
ಸ್ವಯಂ ನಿಯಂತ್ರಣ ಹೆಚ್ಚಾಗುತ್ತದೆ – ಒಂದು ತಿಂಗಳ ಕಾಲ ಪಿಜ್ಜಾವನ್ನು ತ್ಯಜಿಸಲು ಬಲವಾದ ಇಚ್ಛಾಶಕ್ತಿ ಬೇಕು, ಆದ್ದರಿಂದ ಸ್ವಯಂ ನಿಯಂತ್ರಣವು ಹೆಚ್ಚಾಗುತ್ತದೆ ಮತ್ತು ಭವಿಷ್ಯದಲ್ಲಿ ಆಹಾರದಿಂದ ಅನಾರೋಗ್ಯಕರ ವಸ್ತುಗಳನ್ನು ಹೊರಗಿಡಲು ಸಾಧ್ಯವಾಗುತ್ತದೆ.
ಅರಿವು ಹೆಚ್ಚಾಗುತ್ತದೆ – ಪಿಜ್ಜಾವನ್ನು ತಿನ್ನದೇ ಇದ್ದಾಗ ಆರೋಗ್ಯದಲ್ಲಾದ ಸುಧಾರಣೆಯನ್ನು ಕಂಡಾಗ, ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅದು ಭವಿಷ್ಯದಲ್ಲಿ ತುಂಬಾ ಉಪಯುಕ್ತವಾಗಬಲ್ಲದು.