alex Certify ಬಿಳಿ ಕೂದಲಿಗೆ ಬಣ್ಣ ಹಚ್ಚುವಾಗ ಈ ತಪ್ಪು ಮಾಡಿದ್ರೆ ಆಗಬಹುದು ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಳಿ ಕೂದಲಿಗೆ ಬಣ್ಣ ಹಚ್ಚುವಾಗ ಈ ತಪ್ಪು ಮಾಡಿದ್ರೆ ಆಗಬಹುದು ಸಮಸ್ಯೆ…..!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಬಿಳಿ ಕೂದಲನ್ನು ಕಪ್ಪಗಾಗಿಸಲು ಅನೇಕರು ಕಲರಿಂಗ್‌ ಮಾಡುತ್ತಾರೆ. ಪಾರ್ಲರ್‌ಗೆ ದುಬಾರಿ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಕೂದಲಿಗೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಖರೀದಿಸಿ ಅದನ್ನು ಕೂದಲಿಗೆ ಹಚ್ಚಿಕೊಳ್ಳುತ್ತೇವೆ. ಆದರೆ ಕೂದಲಿಗೆ ಕಲರಿಂಗ್‌ ಮಾಡುವ ಸಂದರ್ಭದಲ್ಲಿ ಕೆಲವೊಂದು ಮಹತ್ವದ ಮಾಹಿತಿಗಳನ್ನು ತಿಳಿದುಕೊಂಡಿರಬೇಕು.

ಕಲರಿಂಗ್‌ ಮಾಡುವ ವೇಳೆ ತಪ್ಪು ಮಾಡಿದ್ರೆ ಕೂದಲಿನ ಸ್ಥಿತಿ ಸಂಪೂರ್ಣ ಹಾಳಾಗುತ್ತದೆ. ಮನೆಯಲ್ಲಿ ಕೂದಲಿಗೆ ಕಲರಿಂಗ್‌ ಮಾಡಿದ ಬಳಿಕ ಅದರ ಬಣ್ಣವು ದೀರ್ಘಕಾಲ ಉಳಿಯಬೇಕೆಂದು ನೀವು ಬಯಸಿದರೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವರು ಬಿಳಿ ಕೂದಲನ್ನು ಕಪ್ಪಾಗಿಸಲು ಪೌಡರ್ ಕೂಡ ಬಳಸುತ್ತಾರೆ. ಅವುಗಳನ್ನು ಅನ್ವಯಿಸಲು ಸರಿಯಾದ ಮಾರ್ಗವನ್ನು ಅನುಸರಿಸದಿದ್ದರೆ ಬಣ್ಣವು ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ. ಮನೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.

ಮೊದಲು ಶಾಂಪೂವಿನಿಂದ ಕೂದಲನ್ನು ತೊಳೆಯಿರಿ – ಕೂದಲಿಗೆ ಬಣ್ಣವನ್ನು ಹಚ್ಚುವ ಮೊದಲು ಕೂದಲನ್ನು ಶಾಂಪೂವಿನಿಂದ ಸ್ವಚ್ಛವಾಗಿ ತೊಳೆಯಿರಿ. ಶಾಂಪೂ ಕೂದಲಿನ ಕೊಳಕು ಮತ್ತು ಎಣ್ಣೆಯನ್ನು ತೆಗೆದುಹಾಕುತ್ತದೆ.

ದೀರ್ಘಕಾಲದವರೆಗೆ ಬಣ್ಣವನ್ನು ಹಚ್ಚಿಕೊಂಡು ಇರಬೇಡಿ –  ಬಣ್ಣವನ್ನು ದೀರ್ಘಕಾಲದವರೆಗೆ ಕೂದಲಿನ ಮೇಲೆ ಬಿಡಬಾರದು ಎಂಬುದನ್ನು ನೆನಪಿನಲ್ಲಿಡಿ. ದೀರ್ಘಕಾಲದವರೆಗೆ ಕೂದಲಿಗೆ ಬಣ್ಣವನ್ನು ಹಚ್ಚಿಯೇ ಇಡುವುದರಿಂದ ನೆತ್ತಿಗೂ ಕಲರ್‌ ಹತ್ತಿಕೊಳ್ಳುತ್ತದೆ. ಶಾಂಪೂ ಹಚ್ಚಿದರೂ ಈ ಬಣ್ಣ ಸುಲಭವಾಗಿ ಹೋಗುವುದಿಲ್ಲ.

ಕಂಡೀಷನರ್ ಅನ್ನು ಅನ್ವಯಿಸಬೇಕುಕೂದಲಿಗೆ ಬಣ್ಣ ಹಾಕಿದ ನಂತರ ಉತ್ತಮ ಕಂಡಿಷನರ್ ಅನ್ನು ಅನ್ವಯಿಸಬೇಕು. ಏಕೆಂದರೆ ಬಣ್ಣ ಹಾಕಿದ ನಂತರ ಹೇರ್ ಕಂಡೀಷನಿಂಗ್ ಬಹಳ ಮುಖ್ಯ. ಇದು ನಿಮ್ಮ ಕೂದಲಿಗೆ ಪೋಷಣೆ ಮತ್ತು ಹೊಳಪನ್ನು ನೀಡುತ್ತದೆ. ಕಂಡೀಷನಿಂಗ್, ಬಣ್ಣದ ರಾಸಾಯನಿಕಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ. ಹಾಗಾಗಿ ಮನೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...