ಚಾಮರಾಜನಗರ: ಚಾಮರಾಜನಗರದಲ್ಲಿ ಚುಕ್ಕೆ ರೋಗದ ಬಳಿಕ ಇದೀಗ ಮತ್ತೊಂದು ಕಾಯಿಲೆ ಪತ್ತೆಯಾಗಿದ್ದು, ಒಂದೇ ಕುಟುಂಬದ ನಾಲ್ವರು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ.
ಕೊಳ್ಳೆಗಾಲ ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ರೋಗ ಉಲ್ಬಣಗೊಂಡು ಕೈ-ಕಾಲು ಸ್ವಾದೀನ ಕಳೆದುಕೊಂಡಿದ್ದಾರೆ. ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಸೈಯದ್ ರೆಹಮತ್ ಉಲ್ಲಾ ಹಾಗೂ ರಫಿಯಾ ದಂಪತಿಗೆ 10 ಜನ ಮಕ್ಕಳು ಅವರಲ್ಲಿ ನಾಲ್ವರಿಗೆ ಈ ಕಾಯಿಲೆ ಬಂದಿದೆ. ತಾಸಿನ್ ಆಜ್, ಇದಾಯತ್, ಇಮ್ರಾನ್ ನೂರ್ ಅಹ್ಮದ್ ಎಂಬ ನಾಲ್ವರು ವಿಚಿತ್ರ ರೋದದಿಂದ ಬಳಲುತ್ತಿದ್ದಾರೆ. ಒಂದೇ ಕುಟುಂಬದ ಅಕ್ಕ ಹಾಗೂ ಮೂವರು ತಮ್ಮಂದಿರು ಮಸ್ಕ್ಯೂಲಾರ್ ಡಿಸ್ಟ್ರೊಫಿ ಎಂಬ ಕಾಯಿಲೆ ಇದ್ದು, ಕೈ-ಕಾಲು ಸ್ವಾಧೀನವಿಲ್ಲದಂತಾಗಿದೆ. ಮುಂದೆ ಜೀವನ ಸಾಗಿಸುವುದೇ ದುಸ್ಥರವಾಗಿದೆ. ಹಿಟ್ಟಿದ 20 ವರ್ಷಗಳ ಕಾಲ ಚನ್ನಾಗಿಯೇ ಒಡಾಡಿಕೊಂಡಿದ್ದ ಇವರಿಗೆ ಬಳಿಕ ಏಕಾಏಕಿ ಮೆಟ್ಟಿಲು ಹತ್ತಲು ಕಷ್ಟವಾಗ ತೊಡಗಿದೆ. ನಂತರ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ವಂಶವಾಹಿನಿಯಿಂದ ಈ ರೋಗ ಬರುವ ಸಾಧ್ಯತೆ ಇದ್ದು, ಇದಕ್ಕೆ ಸೂಕ್ತವಾದ ಚಿಕಿತ್ಸೆ ಇಲ್ಲ. ಆದರೂ ಕುಟುಂಬದವರ ಚಿಕಿತ್ಸೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.