ಬೆಂಗಳೂರು : ಆಗಸ್ಟ್- ಸೆಪ್ಟೆಂಬರ್ ನಲ್ಲೂ ಮಳೆ ಬರೋದು ಅನುಮಾನ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಹವಾಮಾನ ಇಲಾಖೆ ಹೇಳುವ ಪ್ರಕಾರ ಮಳೆ ತೀರ ಕಡಿಮೆ ಇದೆ. ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಬರೋದು ಅನುಮಾನವಂತೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಕೆಲವು ಕಡೆ ಮಳೆ ಇಲ್ಲದೇ ಬೆಳೆ ಒಣಗುತ್ತಿದೆ .ಬರ ಪರಿಹಾರಕ್ಕೆ ಕೇಂದ್ರದಲ್ಲಿ ಒಂದಿಷ್ಟು ನಿಯಮ ಇವೆ. ಬರ ಪೀಡಿತ ತಾಲೂಕಿನಲ್ಲಿ ಗ್ರೌಂಡ್ ಟ್ರೂಥ್ ವೆರಿಫಿಕೇಷನ್ ಮಾಡಲಾಗುತ್ತದೆ. ನಂತರ ಬರ ಪರಿಹಾರ ಪ್ರದೇಶವೆಂದು ಘೋಷಣೆ ಮಾಡಲಾಗುತ್ತದೆ ಎಂದರು.
ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ ಪಾಲಿಸಬೇಕು. ಬರಪೀಡಿತ ಪ್ರದೇಶಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇನ್ನೂ ಬಂದಿಲ್ಲ, ಇದಕ್ಕೆ ಮಾರ್ಗಸೂಚಿ ಅಡ್ಡಿಬಂದಿರುವುದರಿಂದ ಘೋಷಣೆ ಮಾಡಲು ಆಗುತ್ತಿಲ್ಲ. ಸಂಪೂರ್ಣ ಮಾಹಿತಿ ತರಿಸಿಕೊಂಡು ಈ ಬಗ್ಗೆ ಘೋಷಣೆ ಮಾಡಲಿದ್ದೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.