ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO) ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದಿರುವ ಪ್ರಜ್ಞಾನ್ ರೋವರ್ ಅಧ್ಯಯನ ಶುರು ಮಾಡಿದೆ. ಇದೀಗ ಇಸ್ರೋ ಪ್ರಜ್ಞಾನ್ ರೋವರ್ ಕಾರ್ಯಾಚರಣೆಯ ಫೋಟೋವೊಂದನ್ನು ಬಿಡುಗಡೆ ಮಾಡಿದೆ.
ಚಂದ್ರಯಾನ-3 ಮಿಷನ್ ಕಾರ್ಯಾಚರಣೆ ಆರಂಭವಾಗಿದೆ. ಎಲ್ಲಾ ವ್ಯವಸ್ಥೆಗಳು ಸರಿಯಾಗಿ ನಡೆಯುತ್ತಿವೆ. ಲ್ಯಾಂಡರ್ ಮಾಡ್ಯೂಲ್ಗಳಾದ ಪೇಡ್ ಇಲ್ಸಾ ರಂಭಾ ಮತ್ತು ಚಾಸ್ಟೆ ಸಾಧನಗಳು ಇಂದು ಆನ್ ಆಗಿ ಕಾರ್ಯ ನಿರ್ವಹಿಸಲಿವೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಅಧ್ಯಯನ ಆರಂಭಿಸಿದ್ದು, ಪ್ರಮುಖವಾಗಿ ಚಂದ್ರನ ಮೇಲೆ ಮುಂದಿನ 14 ದಿನಗಳವರೆಗೆ ಸಂಶೋಧನೆ ನಡೆಸಲಿದೆ.
ಪ್ರಜ್ಞಾನ್ ರೋವರ್ ಚಂದ್ರನ ಮೇಲೆ 14 ದಿನಗಳ ಕಾಲ ಸಂಶೋಧನೆ ನಡೆಸಲಿದೆ. ಸೌರ ಶಕ್ತಿಯ ಸಹಾಯದಿಂದ, ರೋವರ್ ಮತ್ತು ಲ್ಯಾಂಡರ್ ಹವಾಮಾನ ಪರಿಸ್ಥಿತಿಗಳು ಮತ್ತು ಜಾರ್ ಮೇಲಿನ ಮೇಲ್ಮೈ ರಚನೆಯನ್ನು ಅನ್ವೇಷಿಸುತ್ತದೆ. ಇದಕ್ಕಾಗಿ ಇಸ್ರೋ ಆಧುನಿಕ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ವಿಕ್ರಮ್ ಲ್ಯಾಂಡರ್ನಿಂದ ಹೊರಬರುವ ಪ್ರಜ್ಞಾನ್ ರೋವರ್ನ ಮೊದಲ ಫೋಟೋವನ್ನು ಇಸ್ರೋ ಹಂಚಿಕೊಂಡಿದೆ.