BIG BREAKING : ‘ಚಂದ್ರಯಾನ-3’ ಮಿಷನ್ ಸಕ್ಸಸ್ : ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್’ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ

ದುನಿಯಾ ಸ್ಪೆಷಲ್ ಡೆಸ್ಕ್ : ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO)  ಪ್ರಯತ್ನ ಯಶಸ್ವಿಯಾಗಿದೆ. ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -3 ( Chandrayana-3) ಉಡಾವಣೆಯೊಂದಿಗೆ ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದೆ.

‘ಇಸ್ರೋ’ ವಿಜ್ಞಾನಿಗಳ ಪರಿಶ್ರಮ ಹಾಗೂ ಕೋಟ್ಯಾಂತರ ಭಾರತೀಯರ ಪ್ರಾರ್ಥನೆಗೆ ತಕ್ಕ ಪ್ರತಿ ಫಲ ಸಿಕ್ಕಿದ್ದು, ‘ವಿಕ್ರಮ ಲ್ಯಾಂಡರ್’ ನೌಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿದೆ.

Image

ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯು ಸಂಜೆ 5.47 ಕ್ಕೆ ಪ್ರಾರಂಭವಾಗಿದ್ದು, ಸಂಜೆ 6:04 ರ ವೇಳೆಗೆ ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದೆ. ಇಸ್ರೋ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಯನ್ನು ಇಡೀ ಭಾರತವೇ ಕೊಂಡಾಡಿದೆ. ಈ ಮೂಲಕ ಭಾರತ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ.ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಗಾಗಿ ರಾಜ್ಯದೆಲ್ಲೆಡೆ ಹೋಮ ಹವನ, ಪ್ರಾರ್ಥನೆ ನಡೆದಿತ್ತು. ಚಂದ್ರಯಾನ-3 ಯಶಸ್ವಿಯಾಗಲೆಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

‘ಚಂದ್ರಯಾನ-3’  ಜುಲೈ 14 ರಂದು ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಉಡಾವಣೆ ಮಾಡಿದ್ದರು. ಸುದೀರ್ಘ 40 ದಿನಗಳ ಕಾಲ ಅದರ ಚಲನವಲನವನ್ನು ವೀಕ್ಷಿಸುತ್ತಾ ವಿಜ್ಞಾನಿಗಳು ಕುಳಿತಿದ್ದರು.

Image

ಜುಲೈ 14 ರಂದು GSLV-3 ರಾಕೆಟ್ ಗಳನ್ನು ಹೊತ್ತ ಚಂದ್ರಯಾನ -3 ನೌಕೆ ಆಂsಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತ್ತು. ಆಗಸ್ಟ್ 17 ರಂದು ಚಂದ್ರಯಾನ -1 ಬಾಹ್ಯಾಕಾಶ ನೌಕೆಯಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿತ್ತು.
ಚಂದ್ರಯಾನ-3 ನೌಕೆ ನಭಕ್ಕೆ ಹೊತ್ತೊಯ್ಯುವ GSLV-MK3 ರಾಕೆಟ್, GSLV-MK3 ರಾಕೆಟ್-43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿತ್ತು. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read