ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲು ಹಂತಿಮ ಹಂತಕ್ಕೆ ಬಂದಿದ್ದು, ಸಂಜೆ 5.44 ರಿಂದ ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಇದೀಗ ಬಂದ ಮಾಹಿತಿ ಪ್ರಕಾರ ಇಸ್ರೋ ವಿಜ್ಞಾನಿಗಳು ಪ್ಲ್ಯಾನ್ ಬಿ ಮೊರೆ ಹೋಗದಿರಲು ತೀರ್ಮಾನ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಚಂದ್ರನ ಮೇಲೆ ನೌಕೆ ಲ್ಯಾಂಡ್ ಮಾಡುವಾಗ ಒಂದು ವೇಳೆ ಹವಾಮಾನ ವೈಪರೀತ್ಯ ಉಂಟಾದರೆ ಆಗಸ್ಟ್ 27 ರಂದು ಲ್ಯಾಂಡಿಂಗ್ ಮಾಡಲು ಯೋಚಿಸಿದ್ದರು. ಇದಕ್ಕೆ ಪ್ಲ್ಯಾನ್ ಬಿ ಎಂದು ಕರೆದಿದ್ದರು.
ಆದರೆ ಸದ್ಯಕ್ಕೆ ಅನುಕೂಲಕರವಾದ ವಾತಾವರಣವಿರುವುದರಿಂದ ಪ್ಲ್ಯಾನ್ ಬಿ ಕ್ಯಾನ್ಸಲ್ ಮಾಡಿ ಇದೀಗ ವಿಕ್ರಮ್ ಲ್ಯಾಂಡರ್ ಇಳಿಸಲು ಎಲ್ಲಾ ಪ್ರಕ್ರಿಯೆ ಕೈಗೊಂಡಿದ್ದಾರೆ.ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲು ಹಂತಿಮ ಹಂತಕ್ಕೆ ಬಂದಿದ್ದು, ಸಂಜೆ 5.44 ರಿಂದ ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯೋಜನೆ ಬಹುತೇಕ ಯಶಸ್ವಿಯ ಹಂತದಲ್ಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂದರೆ ಇಂದು ಸಂಜೆ 6 ಗಂಟೆ 4 ನಿಮಿಷ ಸುಮಾರಿಗೆ ಚಂದ್ರಯಾನದ ನೌಕೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.