ಭಾರತೀಯ ಆಹಾರ ನಿಗಮದಲ್ಲಿ (ಎಫ್ ಸಿಐ) ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಕಂಪನಿಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಎಫ್ ಸಿಐ ಬೃಹತ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಫ್ ಸಿಐ ಒಟ್ಟು 5,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸಜ್ಜಾಗಿದೆ.
ಎಫ್ ಸಿಐ ನೇಮಕಾತಿ ಹುದ್ದೆಗಳು: ವಾಚ್ ಮ್ಯಾನ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್, ಜೂನಿಯರ್ ಎಂಜಿನಿಯರ್, ಟೈಪಿಸ್ಟ್, ಪ್ರವರ್ಗ-3 ಸೇರಿದಂತೆ ಇತರ ಹುದ್ದೆಗಳು.
ಎಫ್ ಸಿಐ ಒಟ್ಟು ಹುದ್ದೆ: 5000
ಶೈಕ್ಷಣಿಕ ಅರ್ಹತೆಗಳು.
ಎಫ್ ಸಿಐ ಹುದ್ದೆಗಳಿಗೆ ಅರ್ಹತೆ: ಪದವಿ, ಡಿಪ್ಲೊಮಾ, B.Tech/ ಎಂಜಿನಿಯರಿಂಗ್, 8ನೇ ತರಗತಿ (ವಾಚ್ ಮ್ಯಾನ್ ಹುದ್ದೆಗೆ)
ವಯಸ್ಸಿನ ಮಿತಿ.
ಎಫ್ ಸಿಐ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 25 ರಿಂದ 27 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ.
ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಇತರೆ ಅಭ್ಯರ್ಥಿಗಳಿಗೆ – ರೂ.250/-
ಪರೀಕ್ಷೆ ದಿನಾಂಕ.
ಎಫ್ ಸಿಐ ಉದ್ಯೋಗ ಪರೀಕ್ಷೆ ದಿನಾಂಕಗಳು: ಈ ವರ್ಷದ ಡಿಸೆಂಬರ್ ನಲ್ಲಿ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಯಿದೆ.
ಪ್ರಮುಖ ದಿನಾಂಕಗಳು.
ಎಫ್ ಸಿಐ ನೇಮಕಾತಿ ಪ್ರಮುಖ ದಿನಾಂಕಗಳು: ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳಾದ ಅರ್ಜಿಯ ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕಗಳ ವಿವರಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.
ಉದ್ಯೋಗ ಸ್ಥಳ.
ಎಫ್ ಸಿಐ ಉದ್ಯೋಗ ಸ್ಥಳ: ದೇಶದ ವಿವಿಧ ಭಾಗಗಳಲ್ಲಿ ಪೋಸ್ಟಿಂಗ್ ಗಳನ್ನು ಒದಗಿಸಲಾಗಿದೆ.
ಸಂಬಳ..
ಎಫ್ಸಿಐ ಉದ್ಯೋಗಗಳ ಸಂಬಳ: 10,000 ರಿಂದ 30,000 ರೂ.
ಆಯ್ಕೆ ವಿಧಾನ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿವಿಧ ಹುದ್ದೆಗಳನ್ನು ಅನುಸರಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಗಳಾಗಬಹುದು.ವಿವಿಧ ಹುದ್ದೆಗಳಿಗೆ ಪಠ್ಯಕ್ರಮ, ವಯಸ್ಸಿನ ಸಡಿಲಿಕೆ ಮುಂತಾದ ವಿವರಗಳಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ www.fci.gov.in ವೀಕ್ಷಿಸಿ.