ಮುಂಬೈ: ಭಾರತದ ಪ್ರಮುಖ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಒಂದಾದ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ಜಿಯೋಸಿನಿಮಾ ಸಿದ್ಧವಾಗಿದೆ.
ಆಗಸ್ಟ್23ರಿಂದ ನಡೆಯಲಿರುವ ಟೂರ್ನಿಯಲ್ಲಿ ಸೌರಾಷ್ಟ್ರದ ಅತ್ಯುತ್ತಮ ಪ್ರತಿಭೆಗಳು ಕಣಕ್ಕಿಳಿಯಲಿದ್ದು, ಇದರ ಪಂದ್ಯಗಳು ಜಿಯೋಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ. ಟೂರ್ನಿಯಲ್ಲಿ ಐದು ತಂಡಗಳು ರೌಂಡ್-ರಾಬಿನ್ ಸ್ವರೂಪದಲ್ಲಿ ಎಂಟು ದಿನಗಳ ಕಾಲ ಹೋರಾಡಲಿವೆ. ಅಂತಿಮವಾಗಿ ಅಗ್ರ ಎರಡು ತಂಡಗಳು ಆಗಸ್ಟ್ 31ರಂದು ಸೌರಾಷ್ಟ್ರದ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಲು ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ಆಯೋಜಿಸಿರುವ, ಪ್ರತಿಷ್ಠಿತ ಮತ್ತು ಜನಪ್ರಿಯ ರಾಜ್ಯ ಮಟ್ಟದ ಟಿ20 ಪಂದ್ಯಾವಳಿಯು ಎಲ್ಲಾ ವೀಕ್ಷಕರಿಗೆ ಉಚಿತವಾಗಿ ಲಭ್ಯವಿರುತ್ತದೆ. ಪಂದ್ಯಗಳು ಪ್ರತಿದಿನ ರಾತ್ರಿ 7ಕ್ಕೆ ಪ್ರಾರಂಭವಾಗುತ್ತವೆ. ಆಗಸ್ಟ್ 25 ಮತ್ತು 26ರಂದು ಎರಡು ಪಂದ್ಯಗಳು (ಡಬಲ್ ಹೆಡರ್)ನಡೆಯಲಿದ್ದು, ದಿನದ ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿದೆ.
2023ರ ಸೌರಾಷ್ಟ್ರ ಪ್ರೀಮಿಯರ್ ಲೀಗ್ನಲ್ಲಿ ಆಡಲಿರುವ ಐದು ತಂಡಗಳೆಂದರೆ ಜಲವಾಡ್ ರಾಯಲ್ಸ್, ಕಚ್ ವಾರಿಯರ್ಸ್, ಹಲಾರ್ ಹೀರೋಸ್, ಸೂರತ್ ಲಯನ್ಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್. ಕಳೆದ ವರ್ಷದ ಫೈನಲಿಸ್ಟ್ಗಳಾದ ಹಲಾರ್ ಹೀರೋಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್ ತಂಡಗಳ ನಡುವೆ ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. 2022-23ರ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ 17ರಲ್ಲಿ 16 ಆಟಗಾರರು ಈ ಟೂರ್ನಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.
ಟಾಟಾ ಐಪಿಎಲ್, ಟಾಟಾ ಡಬ್ಲ್ಯುಪಿಎಲ್, ಎಸ್ಎ20, ಎಂಎಲ್ಸಿ, ಅಬುಧಾಬಿ ಟಿ10, ಜಿಮ್-ಆಫ್ರೋ ಟಿ10, ಭಾರತ ತಂಡದ ವೆಸ್ಟ್ಇಂಡೀಸ್ಪ್ರವಾಸ, ಇತ್ತೀಚೆಗೆ ಭಾರತ ತಂಡದ ಐರ್ಲೆಂಡ್ ಪ್ರವಾಸದ ದಾಖಲೆ ಮುರಿಯುವ ಪ್ರಸ್ತುತಿಗಳ ನಂತರ ಸೌರಾಷ್ಟ್ರ ಪ್ರೀಮಿಯರ್ ಲೀಗ್ ಅನ್ನೂ ನೇರಪ್ರಸಾರ ಮಾಡಲಾಗುತ್ತಿದೆ.
ವೀಕ್ಷಕರು ಜಿಯೋ ಸಿನಿಮಾ ಆ್ಯಪ್(ಐಒಎಸ್ಮತ್ತು ಆಂಡ್ರಾಯ್ಡ್) ಡೌನ್ಲೋಡ್ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ.