alex Certify BIGG NEWS : ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ದೇಗುಲಗಳಲ್ಲಿ `ಅರಿಶಿಣ-ಕುಂಕುಮ’ ವಿತರಣೆ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ದೇಗುಲಗಳಲ್ಲಿ `ಅರಿಶಿಣ-ಕುಂಕುಮ’ ವಿತರಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ವರಮಹಾಲಕ್ಷ್ಮೀ ಹಬ್ಬದ ದಿನ ಮುಜುರಾಯಿ ದೇವಸ್ಥಾನಗಳಿಗೆ ಭೇಟಿ ನೀಡುವ ಎಲ್ಲಾ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ, ಕಸ್ತೂರಿ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ / ಹೆಣ್ಣಿಗೆ ಬಹಳ ಮಹತ್ಮ ಪೂರ್ಣವಾದನವನ್ನು ನೀಡಿ ಗೌರವಿಸಲಾಗುತ್ತಿದ್ದು, ಪ್ರತೀ ವರ್ಷ ಶ್ರೀ ವರಮಹಾಲಕ್ಷ್ಮಿ ಪತ್ರ ಸ್ವರ್ಣಗೌರಿ ವ್ರತ ಮತ್ತು ನವರಾತ್ರಿಗಳಲ್ಲಿಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ, ಅದರಂತೆ ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ರಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ಆಚರಿಸುವುದು ಪುರಾಣೋಕ್ತವಾಗಿದ್ದು, ಆ ದಿನ ಶ್ರೀವರ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಪ್ರಸಾದವನ್ನು ನೈವೇದ್ಯ ಮಾಡಿ, ಪ್ರಸಾದವನ್ನು ಸ್ವೀಕರಿಸಿದಲ್ಲಿ ಸಕಲ ಸೌಭಾಗ್ಯಗಳೂ, ಅಮ್ಮ ಐಶ್ವರ್ಯಗಳೂ, ಚಮರ್ವಿದ ಫಲಗಳೂ, ಧನ ಧಾನ್ಯಾದಿಗಳೂ ಲಭಿಸುತ್ತವೆ. ಎಂದು ಹೇಳಲ್ಪಟ್ಟಿರುವುದರಿಂದ ಈ ದಿನ ಮಹಿಳೆಯರು ಬಹಳ ಭಕ್ತಿಭಾವಗಳಿಂದ ಮನೆಯಲ್ಲಿ ಶುದ್ದಿಯಾಗಿ ಶ್ರೀ ವರ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ, ದೇವಾಲಯಗಳಿಗೆ ದೇವರ ದರ್ಶನಾರ್ಥಿಯಾಗಿ ಬಂದು ದೇವರ ಪ್ರಸಾದಗಳಾದ ಅರಿಶಿನ, ಕುಂಕುಮ, ಹೂವು ಮುಂತಾದ ಪುಸಾದಗಳನ್ನು ಸ್ವೀಕರಿಸುವ ಸಂವುದಾಯವು ಸಹ ಇರುತ್ತದೆ.

ಆದ್ದರಿಂದ, ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ಶ್ರೀ ವರ ಮಹಾಲಕ್ಷ್ಮೀಯವರ ಕೃಪಾಕಟಾಕ್ಷವು ಲಭಿಸಲೆಂದು ಶ್ರೀ ವರಮಹಾಲಕ್ಷ್ಮಿ ವ್ರತದ ದಿನದಂದು ಅಧಿಸೂಚಿತ ದೇವಾಲಯಕ, ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ-ಕುಂಕುಮ ಮತ್ತು ಹಸಿರು ಬಳಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತವಾಗಿರುತ್ತದೆ.

ಕಳೆದ ವರ್ಷದಲ್ಲಿ ಆಚರಿಸಿದಂತೆ ದಿನಾಂಕ:25.08,2023ರ ಶುಕ್ರವಾರದಂದು ಬರುವ ಶ್ರೀ ವರ ಮಹಾಲಕ್ಷ್ಮೀ ವ್ರತದ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ- ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ, ಗೌರವ ಪೂರ್ವಕವಾಗಿ ಮಹಿಳೆಯರಿಗೆ ನೀಡುವುದು ಹಾಗೂ ಅದರ ವೆಚ್ಚವನ್ನು ಆಯಾಯ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ಭರಿಸಲು ತಿಳಿಸಿದ.

*ಪ್ರಸಾದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ

ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ತಯಾರಿಸಿಕೊಂಡು

ದೇವಾಲಯಕ್ಕೆ ಮಹಿಳೆಯರಿಗೆ ನೀಡುವುದು”.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...