ಬೆಂಗಳೂರು : ರಾಜ್ಯದೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದ್ದು, ನಾಗರಾಜನಿಗೆ ಹಾಲೆರೆದು ಪೂಜೆ ಸಲ್ಲಿಸಿ ಭಕ್ತರು ಸಂಭ್ರಮಿಸಿದ್ದಾರೆ.
ಇಂದು ಬೆಳಗ್ಗೆಯಿಂದಲೇ ನಾಗರದೇವಸ್ಥಾನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.ರಾಜ್ಯದ ಎಲ್ಲಾ ಕಡೆ ಮಹಿಳೆಯರು, ಭಕ್ತರು ನಾಗರಕಲ್ಲಿಗೆ ಹಾಲು ಎರೆದು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಭಕ್ತರು ನಾಗನ ದೇವಾಲಯದತ್ತ ಹೆಜ್ಜೆ ಹಾಕುತ್ತಿರುವ ದೃಶ್ಯ ಕಂಡು ಬಂತು. ಇನ್ನೂ, ನಾಗರಪಂಚಮಿ ಹಿನ್ನೆಲೆ ಹೂವು, ಹಣ್ಣು, ಎಳನೀರು ಮಾರಾಟ ಭರ್ಜರಿಯಾಗಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಬಳಿಯಿರುವ ಈಶಾ ಫೌಡೇಷನ್ನಲ್ಲಿ ಅದ್ದೂರಿ ನಾಗಪೂಜೆ ನಡೆಯಲಿದೆ.
ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ನಾಗರ ಪಂಚಮಿಯನ್ನು ಇಂದು ಸೋಮವಾರ (ಆಗಸ್ಟ್ 21) ಆಚರಿಸಲಾಗುತ್ತದೆ. ನಾಗರ ಪಂಚಮಿಯಂದು ಸೋಮವಾರ ಹಾಲು ಸಕ್ಕರೆ ಯೋಗವೂ ಇದೆ. ಪ್ರಮುಖವಾಗಿರುವ ಈ ಹಬ್ಬವು ಈ ವರ್ಷ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ. ಆದ್ದರಿಂದ, ನಾಗಾ ಪೂಜೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.