ಮಂಗಳೂರು: ಕಾರ್ ನ ಬಾನೆಟ್ ನಲ್ಲಿ ಬೃಹತ್ ಹೆಬ್ಬಾವು ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರ್ ಏಕಾಏಕಿ ನಿಂತಿದ್ದು, ಸ್ಟಾರ್ಟ್ ಮಾಡಲು ಸಾಧ್ಯವಾಗದೆ ಕಾರ್ ಮಾಲೀಕರು ಮೆಕಾನಿಕ್ ಕರೆಸಿದ್ದಾರೆ.
ಮೆಕಾನಿಕ್ ಬಂದು ಬಾನೆಟ್ ತೆರೆದು ನೋಡಿದಾಗ ಬೃಹತ್ ಗಾತ್ರದ ಹೆಬ್ಬಾವು ಮಲಗಿರುವುದು ಕಂಡು ಅಲ್ಲಿದ್ದವರು ಶಾಕ್ ಆಗಿದ್ದಾರೆ. ಮಂಗಳೂರು ನಗರದ ಮಣ್ಣುಗುಡ್ಡೆ ವಾಲಿಬಾಲ್ ಮೈದಾನ ಸಮೀಪದ ರಸ್ತೆಯಲ್ಲಿ ಭಾನುವಾರ ಘಟನೆ ನಡೆದಿದೆ.
ಕುದ್ರೋಳಿ ಕಂಬಳದ ಫ್ಲ್ಯಾಟ್ ಗೆ ಬಂದಿದ್ದ ವ್ಯಕ್ತಿ ಅಲ್ಲಿಂದ ಕಾರ್ ನಲ್ಲಿ ವಾಪಸ್ ತೆರಳುವಾಗ ಮಣ್ಣುಗುಡ್ಡೆ ಸಮೀಪ ಇಂಜಿನ್ ಆಫ್ ಆಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಕಾರ್ ಮುಂದೆ ಚಲಿಸದೆ ನಿಂತಿದ್ದು, ಅಲ್ಲಿಗೆ ಮೆಕಾನಿಕ್ ಕರೆಸಿಕೊಂಡಿದ್ದಾರೆ. ಕಾರ್ ಬಾನೆಟ್ ತೆಗೆದಾಗ ಬೃಹತ್ ಹೆಬ್ಬಾವು ಮಲಗಿರುವುದು ಕಂಡುಬಂದಿದೆ. ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.