ಬೆಂಗಳೂರು : ರಾಜ್ಯ ರಾಜಕಾರಣದ ಬಗ್ಗೆ ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಮತ್ತೊಂದು ಭವಿಷ್ಯ ನುಡಿದಿದ್ದು, ಸರ್ಕಾರಕ್ಕೆ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ ಚುನಾವಣೆ ಪೂರ್ವವೇ ಹೇಳಿದ್ದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ ಚುನಾವಣೆ ಪೂರ್ವವೇ ಹೇಳಿದ್ದೆ. ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ. ರಾಜ್ಯದಲ್ಲಿ ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ. ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.
ಶ್ರಾವಣಮಾಸದ ಮಧ್ಯಂತರ ಭಾಗದಲ್ಲಿ ಭಾರೀ ಮಳೆಯಿಂದ ಜಲಪ್ರಳಯ, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತದೆ. ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತದೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ಪ್ರಕೃತಿಯಲ್ಲಿ ವಿಷಾನಿಲ ಬೀಸುವ ಪ್ರಸಂಗವೂ ಇದ್ದು, ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಾಗಲಿದೆ. ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.