ಬೆಂಗಳೂರು: ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಯುಜಿ ನೀಟ್, ಸಿಇಟಿಗೆ ಮೊದಲ ಸುತ್ತಿನ ಸಂಯೋಜಿತ ಸೀಟು ಹಂಚಿಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಆಗಸ್ಟ್ 23ರ ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 20ರಂದು ಭಾನುವಾರ ರಜೆಯ ಕಾರಣ ದಾಖಲೆ ಸ್ವೀಕಾರ ಮಾಡುವುದಿಲ್ಲ. ಕಾಲೇಜು, ಕೋರ್ಸ್ ಆಯ್ಕೆಗೆ ಆಗಸ್ಟ್ 22 ಬೆಳಗ್ಗೆ 11 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಆಗಸ್ಟ್ 23 ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವಿದ್ದು, ಆಗಸ್ಟ್ 23ರ ಸಂಜೆ 4 ಗಂಟೆವರೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
ಶುಲ್ಕ ಪಾವತಿಸಿ ದಾಖಲೆ ಸಲ್ಲಿಸುವ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಿದ್ದು, ಆಗಸ್ಟ್ 20ರಂದು ರಜೆ ಇರುವುದರಿಂದ ಮೂಲದ ದಾಖಲೆಗಳ ಸ್ವೀಕರಿಸುವುದಿಲ್ಲ. ಮೆಡಿಕಲ್ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಬಾಂಡ್ ನಲ್ಲಿ ಮೊದಲನೇ ಪಾರ್ಟಿ ಅಭ್ಯರ್ಥಿ, ಎರಡನೇ ಪಾರ್ಟಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕರ್ನಾಟಕ ಸರ್ಕಾರ ಎಂದು ನಮೂದಿಸಲು ತಿಳಿಸಲಾಗಿದೆ.