ಇದು 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, 92ನೇ ವಯಸ್ಸಿನಲ್ಲಿ ಹೆರಿಗೆಯಾದ ಚೀನಾದ ಮಹಿಳೆಯ ಕಥೆಯಿದು. ಹೌದು, ಚೀನಾ ಮೂಲದ ಹುವಾಂಗ್ ಯಿಜುನ್ ಎಂಬ 92 ವರ್ಷದ ಮಹಿಳೆ ಲಿಥೋಪಿಡಿಯನ್‌ಗೆ ಜನ್ಮ ನೀಡಿರುವ ವಿಸ್ಮಯಕಾರಿ ಘಟನೆ ಸಂಭವಿಸಿದೆ.
ಹುವಾಂಗ್ ಯಿಜುನ್ 1948ರಲ್ಲಿ ಅವಳು 31 ವರ್ಷದವಳಿದ್ದಾಗ ಗರ್ಭಿಣಿಯಾಗಿರುವ ವಿಷಯ ತಿಳಿಯಿತು. ಆದರೆ, ವೈದ್ಯರು ಅಪಸ್ಥಾನೀಯ ಗರ್ಭಧಾರಣೆಯ ಬಗ್ಗೆ ತಿಳಿಸಿದ್ರು. ಅಂದರೆ, ಇದು ಫಲವತ್ತಾದ ಅಂಡಾಣು ತನ್ನ ಗರ್ಭದೊಳಗೆ ಇರಬೇಕಾದಂತೆ ಇಲ್ಲ ಎಂದರ್ಥ.
ಸಾಮಾನ್ಯವಾಗಿ, ಅಪಸ್ಥಾನೀಯ ಗರ್ಭಾವಸ್ಥೆಯಲ್ಲಿ ಮೊಟ್ಟೆಯು ಫಾಲೋಪಿಯನ್ ಟ್ಯೂಬ್‌ಗಳಿಗೆ ಅಂಟಿಕೊಳ್ಳುತ್ತದೆ. ಆದರೆ, ಈಕೆಯ ಟ್ಯೂಬ್‌ಗಳ ಹೊರಗೆ ಅಂಟಿಕೊಂಡಿತ್ತು. ಇದನ್ನು ಕಿಬ್ಬೊಟ್ಟೆಯ ಅಪಸ್ಥಾನೀಯ ಗರ್ಭಧಾರಣೆ ಎಂದು ಕರೆಯಲಾಗುತ್ತದೆ.
ಕಿಬ್ಬೊಟ್ಟೆಯ ಗರ್ಭಾವಸ್ಥೆಯು ಹುಟ್ಟಲಿರುವ ಮಗುವಿಗೆ ಪ್ರಾಣಾಪಾಯ ಇದೆ ಎಂದರ್ಥವಲ್ಲ. ಆದರೆ, ಇದು ತಾಯಿ ಮತ್ತು ಮಗುವಿಗೆ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಜನಿಸಿದ ಶಿಶುಗಳು ಹುಟ್ಟುವಾಗಲೇ ಶೇ.21ರಷ್ಟು ಸಮಸ್ಯೆಗಳನ್ನು ಹೊಂದಿರುತ್ತಾರೆ. ದುರದೃಷ್ಟವಶಾತ್, ಹುವಾಂಗ್ ಪ್ರಕರಣದಲ್ಲಿ ಮಗು ಬದುಕುಳಿಯಲಿಲ್ಲ.
ಹುವಾಂಗ್‌ನ ಹೊಟ್ಟೆಯಲ್ಲಿದ್ದ ಮಗು ತನ್ನ ದೇಹವು ಅದನ್ನು ಹೊರಹಾಕಲು ಸಾಧ್ಯವಾಗದ ಗಾತ್ರಕ್ಕೆ ಬೆಳೆದಿದೆ. ಭ್ರೂಣವನ್ನು ಇಟ್ಟುಕೊಳ್ಳುವುದರಿಂದ ಮುಂದೆ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಅವಳಿಗೆ ಭರಿಸಲಾಗಲಿಲ್ಲ. ಇಂದಿನ ಕರೆನ್ಸಿಯಲ್ಲಿ ಸರಿಸುಮಾರು ಡಾಲರ್ 150 (ಸುಮಾರು ರೂ. 12,500) ಗೆ ಸಮನಾಗಿದೆ. ಆ ಸಮಯದಲ್ಲಿ ಆಕೆಯ ಕುಟುಂಬಕ್ಕೆ ಇದು ಅಗಾಧವಾದ ಮೊತ್ತವಾಗಿತ್ತು. ಹೀಗಾಗಿ ಆಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ.
ಮಗುವಿನ ದೇಹವು ನೈಸರ್ಗಿಕವಾಗಿ ಹೊರಹಾಕಲು ತುಂಬಾ ದೊಡ್ಡದಾಗಿದ್ದರೆ, ಸತ್ತ ಅಂಗಾಂಶದ ಸುತ್ತಲೂ ಕ್ಯಾಲ್ಸಿಯಂ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಈ ರೂಪಾಂತರವು ಕಲ್ಲಿನ ಮಗು ರಚನೆಗೆ ಕಾರಣವಾಗುತ್ತದೆ. ಅಂತಿಮವಾಗಿ 2009 ರಲ್ಲಿ, 92ನೇ ವಯಸ್ಸಿನಲ್ಲಿ, ಅವರು 60 ವರ್ಷಗಳ ಕಾಲ ಹೊತ್ತೊಯ್ದ ಭ್ರೂಣವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದ್ರು.