ಜ್ವರವೆಂದು ಆಸ್ಪತ್ರೆಗೆ ಹೋಗಿದ್ದ ಯುವಕ… ಇಂಜಕ್ಷನ್ ಪಡೆದ ಬೆನ್ನಲ್ಲೇ ಸಾವು…!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಯಸ್ಸಿನವರೂ ಹಠಾತ್ ಆಗಿ ಸಾವನ್ನಪ್ಪುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜ್ವರವೆಂದು ಆಸ್ಪತ್ರೆಗೆ ಹೋಗಿ ಇಂಜಕ್ಷನ್ ಪಡೆದಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವಕನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 31 ವರ್ಷದ ಅಮರ್ ಶೆಟ್ಟಿ ಮೃತ ಯುವಕ.

ಜ್ವರದಿಂದ ಬಳಲುತ್ತಿದ್ದ ಯುವಕ ಆಗಸ್ಟ್ 13ರಂದು ಮಾಗಡಿಯ ಭಾಗ್ಯಶ್ರೀ ಆಸ್ಪತ್ರೆಗೆ ಹೋಗಿದ್ದ. ಈ ವೇಳೆ ವೈದ್ಯರು ಇಂಜಕ್ಷನ್ ಕೊಟ್ಟಿದ್ದರು. ಆದರೆ ಯುವಕ ಈಗ ಏಕಾಏಕಿ ಸಾವನ್ನಪ್ಪಿದ್ದಾನೆ. ಇಂಜಕ್ಷನ್ ಅಡ್ಡಪರಿನಾಮದಿಂದಾಗಿ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿ ಯುವಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ವೈದ್ಯರು ತಾವು ಯಾವುದೇ ಸೈಡ್ ಇಫೆಕ್ಟ್ ಆಗುವ ಇಂಜಕ್ಷನ್ ಕೊಟ್ಟಿಲ್ಲ. ಬರಿ ಪ್ಯಾರಾಸಿಟಮಲ್ ಇರುವ ಇಂಜಕ್ಷನ್ ಕೊಟ್ಟಿದ್ದೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read