alex Certify BIG NEWS : ಗ್ರಾ.ಪಂ.ಗ್ರಂಥಾಲಯಗಳ ವೇಳಾಪಟ್ಟಿ ಬದಲಾವಣೆ ಮಾಡಿ ‘ರಾಜ್ಯ ಸರ್ಕಾರ’ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಗ್ರಾ.ಪಂ.ಗ್ರಂಥಾಲಯಗಳ ವೇಳಾಪಟ್ಟಿ ಬದಲಾವಣೆ ಮಾಡಿ ‘ರಾಜ್ಯ ಸರ್ಕಾರ’ ಆದೇಶ

ಬೆಂಗಳೂರು : ಗ್ರಾಮ ಪಂಚಾಯತ್ ಗ್ರಂಥಾಲಯ’ದ ಹೆಸರನ್ನು ‘ಅರಿವು ಕೇಂದ್ರ’ಗಳೆಂದು ಬದಲು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಕೆಲಸದ ಸಮಯನ್ನು ಪ್ರಸ್ತುತ ಇರುವ 6.00 ಗಂಟೆಯಿಂದ 8.00 ಗಂಟೆವರೆಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದಿಂದ ಸಾರ್ವಜನಿಕ ರಜೆ ಎಂದು ಘೋಷಿಸಲ್ಪಟ್ಟ ರಜಾ ದಿನಗಳು ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೆ ಮಂಗಳವಾರ ಹಾಗೂ ವಾರದ ರಜೆ (ಸೋಮವಾರ) ಹೊರತುಪಡಿಸಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ” ದ ಕೆಲಸದ ಸಮಯನ್ನು ದಿನಾಂಕ:01-09-2023 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಇರುವ 6.00 ಗಂಟೆಯಿಂದ 8.00 ಗಂಟೆವರೆಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

I) ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ
ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ
ಮಧ್ಯಾಹ್ನ 3.00 ಗಂಟೆಯಿಂದ ಸಂಜೆ 7.00
ಗಂಟೆಯವರೆಗೆ

II) ಶನಿವಾರ ಮತ್ತು ಭಾನುವಾರ
ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00ಮಧ್ಯಾಹ್ನ 2.00 ರಿಂದ ಸಂಜೆ 6.00 ಗಂಟೆಯವರೆಗೆ

ಮುಂದುವರೆದು, ಹೆಚ್ಚಿದ ಗಂಟೆಗಳು ಮತ್ತು ವಿಭಜಿತ ಸಮಯವನ್ನು ಗಮನದಲ್ಲಿಟ್ಟುಕೊಂಡು ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ ರೂ. 15,196,72/- ಗಳ ಮಾಸಿಕ ಕನಿಷ್ಟ ವೇತನ ಪಾವತಿಸುವುದು, ಕನಿಷ್ಯ ವೇತನದ ಜೊತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗಧಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು (VDA) ಪಾವತಿಸುವುದು. ಗ್ರಂಥಾಲಯ ಉಪಕರವನ್ನು ಮತ್ತು ಉಳಿಸಿಕೊಂಡು ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳದಿಂದಾಗುವ ಮೊತ್ತವನ್ನು ಉಪಕರದಲ್ಲಿ ಭರಿಸುವುದು, ಈ ಸಂಬಂಧ ಪ್ರತ್ಯೇಕವಾಗಿ ಅದೇಶ ಹೊರಡಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...