ಘಾಜಿಯಾಬಾದ್: ವ್ಯಕ್ತಿಯೊಬ್ಬನನ್ನು ಪೊಲೀಸ್ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಿಂಕು ರಾಜೋರಾ ಎಂದು ಗುರುತಿಸಲಾದ ಪೊಲೀಸ್, ವ್ಯಕ್ತಿಗೆ ಕ್ರೂರವಾಗಿ ಥಳಿಸಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ರಿಂಕುರನ್ನು ಅಮಾನತುಗೊಳಿಸಲಾಗಿದೆ.
ವಿಡಿಯೋದಲ್ಲಿ, ಪೊಲೀಸ್ ಸಮವಸ್ತ್ರದಲ್ಲಿರುವ ಕಾನ್ಸ್‌ಟೇಬಲ್ ರಿಂಕು ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಬೀಳಿಸಿ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದಲ್ಲಿದೆ, ಶೂಗಳಿಂದ ಒದೆಯುತ್ತಿರುವುದನ್ನು ನೋಡಬಹುದು. ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಥಳಿತಕ್ಕೊಳಗಾದ ವ್ಯಕ್ತಿ ತನ್ನ ಸಹೋದರಿಯನ್ನು ಚುಡಾಯಿಸಿದ್ದಕ್ಕಾಗಿ ಪೊಲೀಸ್ ಪೇದೆ ಥಳಿಸಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸ್ ಆಗಿ ಸಾರ್ವಜನಿಕವಾಗಿ ಈ ರೀತಿ ಥಳಿಸುವ ಬದಲು ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಬಹುದಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ,
ಸ್ಥಳೀಯರ ಸಮ್ಮುಖದಲ್ಲಿ ಘಟನೆ ನಡೆದರೂ ಯಾರೊಬ್ಬರೂ ಹಲ್ಲೆಯನ್ನು ತಡೆಯಲು ಮುಂದಾಗಲಿಲ್ಲ. ಆಗಸ್ಟ್ 14 ರಂದು ನಡೆದ ಈ ಘಟನೆಗೆ ಮಕ್ಕಳು ಮತ್ತು ಯುವಕರು ಸಹ ಸಾಕ್ಷಿಯಾಗಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ರಿಂಕು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆ ಹಾಗೂ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
https://twitter.com/Benarasiyaa/status/1691692702092689870?ref_src=twsrc%5Etfw%7Ctwcamp%5Etweetembed%7Ctwterm%5E1691692702092689870%7Ctwgr%5E976385f54a356d219bdbdd4693ac37ad2ffad8fe%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fghaziabad-shocker-policeman-slaps-kicks-man-on-ground-suspended-after-video-of-assault-goes-viral