ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗುವ ನಾಣ್ಯಗಳ ಎಣಿಕೆಗೆ ತಿರುಪತಿ ತಿರುಮಲ ದೇಗುಲ ಮಾದರಿಯ ನಾಣ್ಯ ಎಣಿಕೆ ಯಂತ್ರ ಅಳವಡಿಸಲು ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಮಂಡಳಿ ಮುಂದಾಗಿದೆ.
ಕೇವಲ ಒಂದು ನಿಮಿಷದ ಅವಧಿಯಲ್ಲಿ 300 ನಾಣ್ಯಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಾಮರ್ಥ್ಯದ ಯಂತ್ರ ಎಣಿಕೆ ಮಾಡುತ್ತದೆ. ನಾಣ್ಯಗಳನ್ನು ವರ್ಗೀಕರಿಸಿ ಪ್ರತ್ಯೇಕ ಪ್ಯಾಕೆಟ್ ಗಳಲ್ಲಿ ತುಂಬಿಸುತ್ತದೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೂಕ್ ಫಿಶ್ ಬ್ರಾಂಡ್ ಹೆಸರಿನ ಯಂತ್ರ ಅಳವಡಿಸಲು ದೇವಸ್ವಂ ಮಂಡಳಿ ತೀರ್ಮಾನಿಸಿದೆ.
ಬೆಂಗಳೂರು ಮೂಲದ ಸ್ಟೂಕ್ ಫಿಶ್ ಇನ್ನೋವೇಶನ್ಸ್ ಕಂಪನಿಗೆ ಈ ನಾಣ್ಯ ಎಣಿಕೆ ಯಂತ್ರದ ನಿರ್ಮಾಣ ವಹಿಸಲಾಗಿದ್ದು, 7 ತಿಂಗಳೊಳಗೆ ಯಂತ್ರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.