
ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ, ಕೇರಳ ಮತ್ತು ಮಹಾರಾಷ್ಟ್ರದಲ್ಲಿನ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ.
ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ಹಾಗೂ ಗಣೇಶನ ಹಬ್ಬದ ಪ್ರಯುಕ್ತ ಮಹಾರಾಷ್ಟ್ರದಲ್ಲಿ ಈ ರಾಜ್ಯಗಳ ಕೇಂದ್ರ ಸರ್ಕಾರಿ ನೌಕರರಿಗೆ ಅವಧಿಗಿಂತಲು ನಾಲ್ಕೈದು ದಿನ ಮುನ್ನವೇ ವೇತನ ಮತ್ತು ಪಿಂಚಣಿ ನೀಡಲು ನಿರ್ಧರಿಸಲಾಗಿದೆ.
ಇದರ ಮಧ್ಯೆ ಕೇರಳ ಸರ್ಕಾರವೂ ಸಹ ತನ್ನ ಉದ್ಯೋಗಿಗಳಿಗೆ ಕೊಡುಗೆ ಘೋಷಿಸಿದ್ದು, ಓಣಂ ಹಬ್ಬದ ಪ್ರಯುಕ್ತ ನಾಲ್ಕು ಸಾವಿರ ರೂಪಾಯಿಗಳ ಬೋನಸ್ ನೀಡಲು ಮುಂದಾಗಿದೆ.