alex Certify ಅನೇಕ ಅಪಾಯಕಾರಿ ಕಾಯಿಲೆಯಿಂದ ಪಾರಾಗಲು ಈ ವಿಶಿಷ್ಟ ಸೇಬನ್ನು ತಿನ್ನಲು ಪ್ರಾರಂಭಿಸಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ಅಪಾಯಕಾರಿ ಕಾಯಿಲೆಯಿಂದ ಪಾರಾಗಲು ಈ ವಿಶಿಷ್ಟ ಸೇಬನ್ನು ತಿನ್ನಲು ಪ್ರಾರಂಭಿಸಿ…..!

ಬಹು ಉಪಯೋಗಿ ಸೇಬು ಹಣ್ಣು ಇದು. ಇದನ್ನು ರೋಸ್ ಆಪಲ್, ಜಾವಾ ಆಪಲ್, ಜಂಬು ಮತ್ತು ಮಲಯ ಆಪಲ್ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ವಾಟರ್ ಆಪಲ್ ಅಂತಾನೂ ಇದು ಫೇಮಸ್‌ ಆಗಿದೆ. ಯಾಕಂದ್ರೆ ಇದರಲ್ಲಿ ನೀರಿನ ಪ್ರಮಾಣ ಸಾಕಷ್ಟಿದೆ. ಅನೇಕ ಬಣ್ಣಗಳು ಮತ್ತು ಆಕಾರಗಳಲ್ಲಿ ಇದು ಲಭ್ಯ. ಇದು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರುತ್ತದೆ. ಬಹಳಷ್ಟು ನೀರನ್ನು ಹೊಂದಿರುವುದರಿಂದ ದೇಹವನ್ನು ತೇವಾಂಶದಿಂದ ಇಡಬಲ್ಲದು.

ಬೇಸಿಗೆ ಕಾಲದಲ್ಲಿ ಡಿಹೈಡ್ರೇಶನ್‌ ಸಾಮಾನ್ಯ, ಈ ಸಮಸ್ಯೆಯನ್ನು ತಪ್ಪಿಸಲು ವಾಟರ್‌ ಆಪಲ್‌ ಸೇವಿಸಬಹುದು.ವಾಟರ್‌ ಆಪಲ್‌ನಲ್ಲಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಹಲ್ಲುಗಳನ್ನು ಬಲಪಡಿಸುತ್ತದೆ. ವಾಕರಿಕೆ ಮತ್ತು ಹೊಟ್ಟೆ ತೊಳಸುವ ಸಮಸ್ಯೆ ಇರುವವರಿಗೆ ಈ ಹಣ್ಣು ರಾಮಬಾಣಕ್ಕಿಂತ ಕಡಿಮೆಯಿಲ್ಲ. ವಾಟರ್‌ ಆಪಲ್‌ನಲ್ಲಿ ಪೊಟ್ಯಾಸಿಯಮ್ ಪ್ರಮಾಣವು ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ತಿನ್ನುವುದರಿಂದ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಹ ನಿವಾರಿಸಬಹುದು. ದೃಷ್ಟಿ ದುರ್ಬಲವಾಗಿದ್ದರೆ ವಾಟರ್‌ ಆಪಲ್‌ ತಿನ್ನಲು ಪ್ರಾರಂಭಿಸಿ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಜೊತೆಗೆ ಎ ಕೂಡ ಕಂಡುಬರುತ್ತದೆ. ಇದು ದೃಷ್ಟಿಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸುವಲ್ಲಿ ಸಹ ಈ ಹಣ್ಣು ಪ್ರಯೋಜನಕಾರಿಯಾಗಿದೆ.ಸಾಮಾನ್ಯ ಸೇಬಿನಂತೆಯೇ ಈ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಇದು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾದರೆ ಶೀತ ಮತ್ತು ಕೆಮ್ಮಿನಿಂದ ದೂರವಿರಬಹುದು.

ವಾಟರ್‌ ಆಪಲ್‌ ಅನೇಕ ಅಪಾಯಕಾರಿ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ (ಆಸಿಡಿಟಿ) ಇರುವವರು ಇದನ್ನು ತಿನ್ನಬೇಕು.  ಏಕೆಂದರೆ ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ ಹಾಗಾಗಿ ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ. ಈ ಹಣ್ಣಿನಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿನ ಅಜೀರ್ಣಕ್ಕೂ ಪರಿಹಾರ ನೀಡಬಲ್ಲದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...