ಮೆಕ್ ಡೊನಾಲ್ಡ್ಸ್ ಬಳಿಕ ಆಹಾರ ಪದಾರ್ಥಗಳಿಂದ ಟೊಮೆಟೊ ಕೈಬಿಟ್ಟ ಮತ್ತೊಂದು ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್

ಮೆಕ್ ಡೊನಾಲ್ಡ್ಸ್ ನಂತರ ಮತ್ತೊಂದು ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್ ಭಾರತದಲ್ಲಿ ತನ್ನ ಆಹಾರ ಪದಾರ್ಥಗಳ ಮೆನುವಿನಿಂದ ಟೊಮೆಟೊಗಳನ್ನು ರದ್ದುಗೊಳಿಸಿದೆ.

ತರಕಾರಿಗಳ ಬೆಲೆ ಗಗನಕ್ಕೇರುತ್ತಲೇ ಇರುವುದರಿಂದ, ಬರ್ಗರ್ ಕಿಂಗ್ ತನ್ನ ಬರ್ಗರ್‌ಗಳಿಂದ ಟೊಮೆಟೊಗಳನ್ನು ಸದ್ದಿಲ್ಲದೆ ತೆಗೆದುಹಾಕಿದೆ.

ಟೊಮ್ಯಾಟೊಗಳಿಗೆ ಸಹ ರಜೆ ಬೇಕು… ನಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಎರಡು ಬರ್ಗರ್ ಕಿಂಗ್ ಇಂಡಿಯಾ ಔಟ್‌ಲೆಟ್‌ಗಳಲ್ಲಿ ಅಂಟಿಸಲಾಗಿದೆ.

ಬರ್ಗರ್ ಕಿಂಗ್ ಇಂಡಿಯಾದ ವೆಬ್‌ಸೈಟ್‌ ನ ಪುಟದಲ್ಲಿ ಬಳಕೆದಾರರು ಬರ್ಗರ್‌ಗಳಲ್ಲಿ ಟೊಮೆಟೊ ಇಲ್ಲದಿರುವುದನ್ನು ಸೂಚಿಸಿದ ನಂತರ, ದೇಶದಲ್ಲಿ 400 ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ ಕಂಪನಿಯು ಗ್ರಾಹಕರಿಗೆ ತಾಳ್ಮೆ ವಹಿಸಲು ಮನವಿ ಮಾಡಿದೆ.

ಕಳೆದ ತಿಂಗಳು, ಮೆಕ್‌ ಡೊನಾಲ್ಡ್ ಇಂಡಿಯಾ ಅಧಿಕೃತ ಹೇಳಿಕೆ ನೀಡಿದ್ದು, ‘ತಾತ್ಕಾಲಿಕ ಸಮಸ್ಯೆ’ಯಿಂದಾಗಿ ತನ್ನ ಮೆನುವಿನಿಂದ ಟೊಮೆಟೊಗಳನ್ನು ಕೈಬಿಡುವುದಾಗಿ ಹೇಳಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read