ಬ್ರಿಟಿಷರಿಂದಲೇ ಭಾರತದ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಸುದ್ದಿಯಾಗಿದ್ದ ಯುಕೆ ಪ್ರಧಾನಿ ರಿಷಿ ಸುನಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ‘ಜೈ ಶ್ರೀರಾಮ್’ ಎಂಬ ಘೋಷಣೆಯೊಂದಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಭಾಷಣ ಪ್ರಾರಂಭಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಿಷಿ ಸುನಕ್ ಅವರು ಮಂಗಳವಾರ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರ ರಾಮಾಯಣ ಪಠಣದಲ್ಲಿ ಪಾಲ್ಗೊಂಡರು. ಈ ವೇಳೆ ಭಾಷಣ ಮಾಡಿದ ರಿಷಿ ಸುನಕ್, ಜೈ ಶ್ರೀ ರಾಮ್ ಎಂದು ಮಾತು ಮುಂದುವರೆಸಿದ್ರು. ನಾನೊಬ್ಬ ಹಿಂದೂ ಆಗಿ ಇಲ್ಲಿದ್ದೇನೆ, ಪ್ರಧಾನಿಯಾಗಿ ಅಲ್ಲ ಎಂದು ಹೇಳಿದ್ರು. ಭಾರತದ ಸ್ವಾತಂತ್ರ್ಯ ದಿನದಂದು ಮೊರಾರಿ ಬಾಪು ಅವರು ನಡೆಸಿದ ರಾಮಕಥೆಯಲ್ಲಿ ಉಪಸ್ಥಿತಿಯಿರುವುದು ನನಗೆ ಹೆಮ್ಮೆಯ ವಿಷಯ ಎಂದು ಹೇಳಿದ್ರು.
ಪ್ರಧಾನಿಯಾಗಿ ತಮ್ಮ ಕೆಲಸದ ಬಗ್ಗೆ ಮಾತನಾಡಿದ ಸುನಕ್, ಇದು ದೊಡ್ಡ ಗೌರವವಾದ್ರೂ ಸುಲಭದ ಕೆಲಸವಲ್ಲ ಎಂದು ಹೇಳಿದರು. ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ವಿನಯದಿಂದ ಆಡಳಿತ ನಡೆಸಲು ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಲು ನನಗೆ ಶ್ರೀರಾಮಚಂದ್ರ ಯಾವಾಗಲೂ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದ್ರು.
ರಿಷಿ ಸುನಕ್ ಭಾರತೀಯ ಮೂಲದವರು ಹಾಗೂ ಕರ್ನಾಟಕದ ಅಳಿಯ ಕೂಡ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯೇ ಸರಿ.
ರಿಷಿ ಸುನಾಕ್ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.