HomeKarnatakaBIGG NEWS : ಪಡಿತರ ಚೀಟಿದಾರರೇ ಗಮನಿಸಿ : ಈ ತಿಂಗಳೂ ಖಾತೆಗೆ ಬರಲಿದೆ 5...

BIGG NEWS : ಪಡಿತರ ಚೀಟಿದಾರರೇ ಗಮನಿಸಿ : ಈ ತಿಂಗಳೂ ಖಾತೆಗೆ ಬರಲಿದೆ 5 ಕೆಜಿ ಅಕ್ಕಿ ಹಣ!

 

ಬೆಂಗಳೂರು : ಪಡಿತರ ಚೀಟಿದಾರರಿಗೆ ಸಿಹಿಸುದ್ದಿ, ಈ ತಿಂಗಳೂ ಕೂಡ 5 ಕೆಜಿ ಹೆಚ್ಚುವರಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತೇವೆ  ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವರು ಈ ತಿಂಗಳು ಕೂಡ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುತ್ತೇವೆ, ಸೆಪ್ಟೆಂಬರ್ ನಿಂದಲೂ ಹೆಚ್ಚುವರಿ ಅಕ್ಕಿ ವಿತರಣೆ ಮಾಡುವುದಕ್ಕೆ ಆಗಲ್ಲ. ನಮಗೆ ಇನ್ನೂ ಅಕ್ಕಿ ಸರಬರಾಜು ಆಗಿಲ್ಲ. ಸದ್ಯಕ್ಕೆ ಅಕ್ಕಿ ಬದಲು ಹಣ ಹಾಕುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ತಿಂಗಳು ಹೆಚ್ಚುವರಿ 5 ಕೆಜಿ ಅಲ್ಲಿ ಬದಲು ರಾಜ್ಯ ಸರ್ಕಾರ ಪಡಿತರದಾರರ ಕುಟುಂಬದ ಸದಸ್ಯರಿಗೆ ಹಣ ನೀಡಿತ್ತು. ಒಂದು ಕೆಜಿಗೆ 35 ರೂ ನಂತೆ ಹಣ ಜಮಾ ಮಾಡಿತ್ತು.

ಅನ್ನಭಾಗ್ಯ ಯೋಜನೆಗೆ ಆಂಧ್ರಪ್ರದೇಶದ ಅಕ್ಕಿ ಬರಲಿದೆ. ಎಫ್.ಸಿ.ಐ. ನಿಗದಿಪಡಿಸಿದ ದರಕ್ಕೆ ಅಕ್ಕಿ ಪೂರೈಕೆ ಮಾಡಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ.ಇದರಿಂದಾಗಿ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಣೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಈ ಕುರಿತಾಗಿ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರೊಂದಿಗೆ ಆಂಧ್ರಪ್ರದೇಶದ ಆಹಾರ ಇಲಾಖೆ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ.

ಬೆಂಗಳೂರಿನಲ್ಲಿ ಉಭಯ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದು, ಎಫ್ಸಿಐ ನಿಗದಿಪಡಿಸಿದ ದರದಲ್ಲಿ ಅಕ್ಕಿ ಪೂರೈಕೆ ಮಾಡಲು ಅವಕಾಶ ನೀಡುವ ಜೊತೆಗೆ ನಿರ್ದಿಷ್ಟ ಪ್ರಮಾಣವನ್ನು ತಿಳಿಸಬೇಕು. ಆದಷ್ಟು ಬೇಗನೆ ಅನುಮತಿ ನೀಡಿದಲ್ಲಿ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ನಿಯೋಗ ಹೇಳಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular