ಬೆಳಗಾವಿ: ಕೆಲ ದಿನಗಳಿಂದ ಕೇಳಿಬರುತ್ತಿದ್ದ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಇಂದು ಸ್ವಾತಂತ್ರ್ಯ ದಿನಾಚರಣೆ ದಿನವೂ ಕೇಳಿಬಂದಿದೆ. ಈ ಬಗ್ಗೆ ಲೋಕೋಪಯೋಗಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೇ ವಿಷಯ ಪ್ರಸ್ತಾಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆ ವಿಭಜನೆಗೆ ಸಾಕಷ್ಟು ಒತ್ತಡಗಳು ಕೇಳಿಬರುತ್ತಿವೆ. ಸಭೆಯಲ್ಲಿಯೂ ಈ ನಿಟ್ಟಿನಲ್ಲಿ ಮುಖಂಡರು ಒತ್ತಾಯಿಸುತ್ತಿದ್ದಾರೆ. ಅಖಂಡ ಬೆಳಗಾವಿ ಜಿಲ್ಲೆಯನ್ನು ಗೋಕಾಕ್, ಚಿಕ್ಕೋಡಿ, ಬೆಳಗಾವಿ ಎಂದು ಮೂರು ಜಿಲ್ಲೆಗಳಾಗಿ ವಿಭಜಿಸಬೇಕು ಎಂದು ಒತ್ತಯಿಸಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಆದಷ್ಟು ಬೇಗ ಜಿಲ್ಲೆ ಇಬ್ಭಾಗವಾಗಲಿದೆ. ಬೆಳಗಾವಿ ದಕ್ಷಿಣ, ಉತ್ತರ, ಗ್ರಾಮೀಣ ಒಡೆದು ಬೇರೊಂದು ತಾಲೂಕು ರಚನೆ ಮಾಡಲಾಗುತ್ತದೆ. ಬೆಲಗಾವಿ ತಾಲೂಕು ಸಿಟಿಯಲ್ಲಿ ಇರುತ್ತದೆ ತಹಶೀಲ್ದಾರ್ 1 ಮತ್ತು ತಹಶೀಲ್ದಾರ್ 2 ಇರುತ್ತೆ. ಆಡಳಿತ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕುಗಳನ್ನು ಮಾಡುತ್ತೇವೆ ಎಂದರು.
ಬೆಳಗಾವಿ ಜಿಲ್ಲೆ ಬೌಗೋಳಿಕವಾಗಿ ಬಹಳ ದೊಡ್ದ ಜಿಲ್ಲೆಯಾಗಿದೆ. 506 ಗ್ರಾಮ ಪಂಚಾಯಿತಿ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯಿತಿ ಇರುವ ಜಿಲ್ಲೆಯಾಗಿದೆ. 14 ತಾಲೂಕು, 18 ವಿಧಾನಸಭಾ ಕ್ಷೇತ್ರ ಹಾಗೂ ಎರಡುವರೆ ಲೋಕಸಭಾ ಕ್ಷೇತ್ರ ಅಂದರೆ ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡದ ಕೆಲ ಭಾಗ ಸೇರಿ 55 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.