ನವದೆಹಲಿ : ಇಂದು ದೇಶಾದ್ಯಂತ ಸಂಭ್ರಮದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 10ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 10 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ದಾಖಲೆ ಬರೆದಿದ್ದಾರೆ.
ಸ್ವಾತಂತ್ರ್ಯದ ನಂತರ ಕೆಂಪುಕೋಟೆಯಲ್ಲಿ ಅತೀ ಹೆಚ್ಚು ಧ್ವಜಾರೋಹಣ ಮಾಡಿದ ಕೀರ್ತಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಸಲ್ಲುತ್ತದೆ. ನೆಹರೂ ಅವರು ಕೆಂಪುಕೋಟೆಯಲ್ಲಿ ಬರೋಬ್ಬರಿ 17 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಅವರ ಬಳಿಕ ಇಂದಿರಾ ಗಾಂಧಿ ಅವರು 16 ಬಾರಿ ಧ್ವಜಾರೋಹಣ ನೆರವೇರಿಸಿದ್ರೆ, ಮನೋಮಹೋನ್ ಸಿಂಗ್ 10 ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಆ.15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿಗಳು
ಜವಾಹರ್ ಲಾಲ್ ನೆಹರೂ- 17 ಬಾರಿ
ಇಂದಿರಾ ಗಾಂಧಿ -16 ಬಾರಿ
ಮನ್‌ಮೋಹನ್ ಸಿಂಗ್ – 10 ಬಾರಿ
ನರೇಂದ್ರ ಮೋದಿ – 10 ನೇ ಬಾರಿ
ಅಟಲ್ ಬಿಹಾರಿ ವಾಜಪೇಯಿ – 6 ಬಾರಿ
ರಾಜೀವ್ ಗಾಂಧಿ- 5 ಬಾರಿ
ಪಿ.ವಿ ನರಸಿಂಹ ರಾವ್ – 5 ಬಾರಿ
ಲಾಲ್ ಬಹದ್ದೂರ್ ಶಾಸ್ತ್ರಿ- 2 ಬಾರಿ
ಮೊರಾರ್ಜಿ ದೇಸಾಯಿ – 2ಬಾರಿ
ಚರಣ್ ಸಿಂಗ್ 1 ಬಾರಿ
ವಿ.ಪಿ ಸಿಂಗ್ – 1 ಬಾರಿ
ಹೆಚ್.ಡಿ ದೇವೇಗೌಡ – 1ಬಾರಿ
ಐಕೆ ಗುಜ್ರಾಲ್ -1ಬಾರಿ