ರಾಮನಗರ: ಇಂದು ದೇಶದಾದ್ಯಂತ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲೆಡೆ ವಿಜೃಂಭಣೆಯಿಂದ ಸಂಭ್ರಮಾಚರಣೆ ಮಾಡಲಾಗುತ್ತಿದೆ. ರಾಮನಗರದಲ್ಲಿ ಯುವಕರು ವಿಶಿಷ್ಠ ರೀತಿಯಲ್ಲಿ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಭಕ್ತಿ ಸಾರಿದ್ದಾರೆ.
ರಾಮನಗರದ ಕೆಲ ಯುವಕರ ತಂಡ 600 ಅಡಿ ಎತ್ತರದ ಬೆಟ್ಟದ ಮೇಲೆ 60 ಅಡಿ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಂಜಾನೆಯೇ ಬೆಟ್ಟವನ್ನು ಏರಿದ ಸಚಿನ್ ಹಾಗೂ ಅವರ ತಂಡ 60 ಅಡಿ ಉದ್ದದ ತ್ರಿವರ್ಣಧ್ವಜವನ್ನು 600 ಅಡಿ ಎತ್ತರದ ಬೆಟ್ಟದ ಮೇಲೆ ಹಾರಿಸಿದ್ದಾರೆ.
ಈ ಯುವಕರ ಗುಂಪು ಪ್ರತಿವರ್ಷವೂ ಈ ಬೆಟ್ಟದ ಮೇಲೆ ಧಜಾರೋಹಣ ನೆರವೇರಿಸುತ್ತದೆ. ಪ್ರತಿ ವರ್ಷವೂ ಇವರು ಹಾರಿಸುವ ಬಾವುಟವನ್ನು 5 ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಾರೆ. ಈ ವರ್ಷವೂ ಸಚಿನ್ ಹಾಗೂ ಸ್ನೇಹಿತರು ಬೆಟ್ಟದ ಮೇಲೆ ಬೃಹತ್ ತ್ರಿವರ್ಣಧ್ವಜ ಹಾರಿಸಿ, ರಾಷ್ಟ್ರಗೀತೆಯನು ಹಾಡಿದ್ದಾರೆ.