ನವದೆಹಲಿ : ಆಗಸ್ಟ್ 15 ರ ಇಂದು ಭಾರತವು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಇದು ಅವರು ಕೆಂಪು ಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಲಿದ್ದಾರೆ. ಇಂದು ಬೆಳಗ್ಗೆ ಬೆಳಿಗ್ಗೆ 7.30ಕ್ಕೆ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ.
ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಒಂದು ಸಾವಿರ ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾಗಳು, ಆಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಲಾಗಿದ್ದು, 10 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
1,800 ಜನ ವಿಶೇಷ ಅತಿಥಿಯಾಗಿ ಭಾಗಿ
ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಕೊಂಡಿರುವ 1,800 ಜನರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದೆ. ರಕ್ಷಣಾ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸು ನಿಟ್ಟಿನಲ್ಲಿ ಮತ್ತು ಅವರ ಜತೆಗೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದೆ.
ಉತ್ತಮ ಗ್ರಾಮಗಳ 400 ಮಂದಿ ಸರಪಂಚರು, ರೈತ ಉತ್ಪಾದಕ ಸಂಸ್ಥೆಗಳಲ್ಲಿರುವ 250 ರೈತರು, ಪಿಎಂ- ಕಿಸಾನ್ ಯೋಜನೆಯ 50 ಫಲಾನುಭವಿ, ಪಿಎಂ- ಕೌಶಲ ವಿಕಾಸ್ ಯೋಜನೆಯ 50 ಜನರು, , 50 ದಾದಿಯರು, 50 ಬೆಸ್ತರು, ವಿವಿಧ ಯೋಜನೆಗಳ 50 ಕಾರ್ಮಿಕರು, ಹೊಸ ಸಂಸತ್ ನಿರ್ಮಾಣ ಮಾಡಿದ 50 ಕೆಲಸಗಾರರು, 50 ಖಾದಿ ಕಾರಿಕರು, 50 ಶಿಕ್ಷಕರಿಗೆ ಆಹ್ವಾನ ನೀಡಲಾಗಿದೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ 75 ಜೋಡಿಗಳಿಗೆ ಕೂಡ ಅವರವರ ಸಾಂಪ್ರದಾಯಿಕ ಉಡುಗೆಯಲ್ಲಿ ಸಮಾರಂಭ ವೀಕ್ಷಿಸಲು ಆಹ್ವಾನಿಸಲಾಗಿದೆ.
ಆ.15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿಗಳು
ಜವಾಹರ್ ಲಾಲ್ ನೆಹರೂ- 17 ಬಾರಿ
ಇಂದಿರಾ ಗಾಂಧಿ -16 ಬಾರಿ
ಮನ್‌ಮೋಹನ್ ಸಿಂಗ್ – 10 ಬಾರಿ
ನರೇಂದ್ರ ಮೋದಿ – 10 ನೇ ಬಾರಿ
ಅಟಲ್ ಬಿಹಾರಿ ವಾಜಪೇಯಿ – 6 ಬಾರಿ
ರಾಜೀವ್ ಗಾಂಧಿ- 5 ಬಾರಿ
ಪಿ.ವಿ ನರಸಿಂಹ ರಾವ್ – 5 ಬಾರಿ
ಲಾಲ್ ಬಹದ್ದೂರ್ ಶಾಸ್ತ್ರಿ- 2 ಬಾರಿ
ಮೊರಾರ್ಜಿ ದೇಸಾಯಿ – 2ಬಾರಿ
ಚರಣ್ ಸಿಂಗ್ 1 ಬಾರಿ
ವಿ.ಪಿ ಸಿಂಗ್ – 1 ಬಾರಿ
ಹೆಚ್.ಡಿ ದೇವೇಗೌಡ – 1ಬಾರಿ
ಐಕೆ ಗುಜ್ರಾಲ್ -1ಬಾರಿ