ಕಲಬುರಗಿ : ಭಾರತೀಯ ವಾಯು ಸೇನೆಯಲ್ಲಿ ಅಗ್ನಿಪಥ ಯೋಜನೆಯಡಿ ಕೆಳಕಂಡ ಅಗ್ನಿವೀರ ವಾಯು ಹುದ್ದೆಗಳಿಗೆ ನೋಂದಾಯಿಸಲು 2023ರ ಜುಲೈ 27 ರಿಂದ ಆಗಸ್ಟ್ 17 ರವರೆಗೆ ಜಿಲ್ಲೆಯ ಹಾಗೂ ರಾಜ್ಯದ 17 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಗ್ನಿ ವೀರ ವಾಯು ಹುದ್ದೆಗೆ ಅಭ್ಯರ್ಥಿಗಳು ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ಪಿ.ಯು.ಸಿ.ಯಲ್ಲಿ ಪ್ರತಿಶತ 50 ರಷ್ಟು ಅಂಕ ಪಡೆದಿರಬೇಕು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಗ್ನಿ ವೀರ ವಾಯು ಹುದ್ದೆಗೆ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಡಿಪ್ಲೋಮಾದಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು https://agnipathvayu.cdac.in ವೆಬ್‌ಸೈಟ್‌ದಲ್ಲಿ 2023ರ ಆಗಸ್ಟ್ 17 ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in ವೆಬ್‌ಸೈಟ್‌ನ್ನು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ದೂರವಾಣಿ: 08472-274846ಗೆ ಸಂಪರ್ಕಿಸಲು ಕೋರಲಾಗಿದೆ.