ಆನ್ಲೈನ್ ಪಬ್ಜಿ ಗೇಮ್ ಆಡುವ ವೇಳೆ ತನಗೆ ಪರಿಚಿತನಾದ ಭಾರತೀಯ ಯುವಕನನ್ನು ಮದುವೆಯಾಗಲು ಪಾಕಿಸ್ತಾನದಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್ ಬಹಳ ಸುದ್ದಿಯಲ್ಲಿದ್ದಾರೆ.
ಭಾರತವು ತನ್ನ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿವ ಸಂದರ್ಭದಲ್ಲಿ ಸೀಮಾ ಹೈದರ್ ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ಎಲ್ಲರ ಮನ ಗೆದ್ದಿದ್ದಾರೆ. ಭಾರತದಲ್ಲಿ ‘ಪಾಕಿಸ್ತಾನಿ ಭಾಬಿ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಸೀಮಾ ಹೈದರ್ ಇತ್ತೀಚೆಗೆ ನೋಯ್ಡಾದ ತಮ್ಮ ನಿವಾಸದಲ್ಲಿ ನಡೆದ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಮನ ಗೆದ್ದರು. ದೇಶಭಕ್ತಿಯ ಹೃದಯಸ್ಪರ್ಶಿ ಪ್ರದರ್ಶನದಲ್ಲಿ, ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರು.
https://twitter.com/Pratyus08912874/status/1690925396580298752?ref_src=twsrc%5Etfw%7Ctwcamp%5Etweetembed%7Ctwterm%5E1690925396580298752%7Ctwgr%5E00143e5fee6f804e416c3becc8d24e04aec4233e%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwatch-seema-haider-raises-pakistan-murdabad-hindustan-zindabad-slogans-ahead-of-independence-day
ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್ ಕಥೆಯನ್ನು ಹೊಂದಿರುವ ಸಿನಿಮಾ ಒಂದು ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿದೆ.‘ಕರಾಚಿ ಟು ನೋಯ್ಡಾ’ ಹೆಸರಿನ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದರಲ್ಲಿ ಸ್ವತಃ ಸೀಮಾ ಹೈದರ್ ನಟಿಸುತ್ತಿದ್ದಾರೆ.