ನಟಿ ಸುಧಾರಾಣಿ ಇಂದು ತಮ್ಮ 50ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1978 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅಭಿನಯದ ‘ಕಿಲಾಡಿ ಕಿಟ್ಟು’ ಚಿತ್ರದಲ್ಲಿ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.
ಬಾಲ ಕಲಾವಿದೆಯಾಗಿ ಮಿಂಚಿದ ಇವರು 1986ರಲ್ಲಿ ಬಿಡುಗಡೆಯಾದ ‘ಆನಂದ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸಿದರು. ನಟಿ ಸುಧಾರಾಣಿ ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ತೆರೆ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ‘ತುರ್ತು ನಿರ್ಗಮನ’ ಹಾಗೂ ‘ತ್ರಿಕೋನ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸುಧಾರಾಣಿ ಇತ್ತೀಚಿಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಎಂಬ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.