BIG NEWS : ವೈಟ್ ಬೋರ್ಡ್ ಕಾರು ಇದ್ದವರ ‘BPL ಕಾರ್ಡ್’ ರದ್ದು ಪ್ರಕ್ರಿಯೆ ಆರಂಭ.!

ಬೆಂಗಳೂರು : ವೈಟ್ ಬೋರ್ಡ್ ಕಾರು ಇದ್ದವರ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಲಾಗಿದ್ದು, ಆಹಾರ ಇಲಾಖೆಯಿಂದ ನಾಲ್ಕು ಚಕ್ರ ವಾಹನಗಳ ಸರ್ವೆ ನಡೆಯುತ್ತಿದೆ.

ಈ ವರ್ಷ ವೈಟ್ ಬೋರ್ಡ್ ಕಾರು ಹೊಂದಿರುವ ನಾಲ್ಕು ಚಕ್ರದ ವಾಹನ ಸರ್ವೆಗೆ ಆಹಾರ ಇಲಾಖೆ ಮುಂದಾಗಿದೆ. ಮುಂದಿನ ತಿಂಗಳ ಒಳಗಡೆ ಪ್ರಕ್ರಿಯೆ ಶುರು ಮಾಡಲಿದ್ದಾರಂತೆ. ಅದೇ ರೀತಿ ಆರ್ಟಿಓಯಿಂದ ಫೋರ್ ವ್ಹೀಲರ್ ಹೊಂದಿರುವವರ ಮಾಹಿತಿ ಬರಲಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಈ ಮೂಲಕ ಒಂದಷ್ಟು ಬಿಪಿಎಲ್ ಕಾರ್ಡ್ ಗಳಿಗೆ ಕತ್ತರಿ ಬೀಳುವುದಂತೂ ನಿಜ.

ಒಟ್ಟಿನಲ್ಲಿ ವೈಟ್ ಬೋರ್ಡ್ ಕಾರು ಇರುವ ಪಡಿತರ ಚೀಟಿ ರದ್ದಾಗಲಿದ್ದು, ಈ ಮೂಲಕ ಸರ್ಕಾರ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ಇಲ್ಲ, ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದು K.H ಮುನಿಯಪ್ಪಮಹತ್ವದ ಘೋಷಣೆ ಮಾಡಿದ್ದರು. ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ, ಯೆಲ್ಲೋ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದರು.ಅದೇ ರೀತಿ ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ K.H ಮುನಿಯಪ್ಪ ಹೇಳಿದ್ದರು.

ಸದ್ಯ, ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಲು ಅನುಮೋದನೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು, ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿಗೆ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಅನುಮೋದನೆಯನ್ನು ನೀಡಲಾಗಿದೆ. ಮುಂದುವರೆದು ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ನಿರ್ದೇಶಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read