BIG NEWS: ರಾಜಕಾರಣಿಗಳ ಹೆಸರು ಹೇಳಿ ಅಮಾಯಕರನ್ನು ವಂಚಿಸುತ್ತಿದ್ದ ದಂಪತಿ ಅರೆಸ್ಟ್

ಬೆಂಗಳೂರು: ರಾಜಕಾರಣಿಗಳ ಹೆಸರು ಹೇಳಿ ಅಮಾಯಕರಿಗೆ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಬಾಬು ಹಾಗೂ ಶಿಲ್ಪಾ ಬಂಧಿತ ಆರೋಪಿಗಳು. ಚೈನ್ ಲಿಂಕ್ ಮೂಲಕ ದಂಪತಿ ಜನರಿಗೆ ವಂಚಿಸುತ್ತಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಕೇರಳ ಮೂಲದವರೇ ಇವರ ಪ್ರಮುಖ ಟಾರ್ಗೆಟ್ ಆಗಿತ್ತು.

ಆರ್.ಎಲ್.ಜೆ.ಪಿ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದ ಶಿಲ್ಪಾ, ತಾನು ಎನ್ ಡಿಎ ರಾಷ್ಟ್ರೀಯ ಕಮಿಟಿ ಸದಸ್ಯೆ ಎಂದು ಜನರನ್ನು ಪರಿಚಯಿಸಿಕೊಳ್ಳುತ್ತಿದ್ದಳು. ರಾಜಕಾರಣಿಗಳ ಜೊತೆಗೆ ತಾವಿರುವ ಫೋಟೋಗಳನ್ನು ತೋರಿಸಿ ಸರ್ಕಾರದ ಮಟ್ಟದಲ್ಲಿ ಕೆಲಸಗಳನ್ನು ಮಾಡಿಕೊಡುವುದಾಗಿ ನಂಬಿಸುತ್ತಿದ್ದರು. ಆರಂಭದಲ್ಲಿ ಸ್ವಲ್ಪ ಹಣಗಳನ್ನು ಕೊಟ್ಟು ಜನರಲ್ಲಿ ನಂಬಿಕೆ ಹುಟ್ಟಿಸುತ್ತಿದ್ದ ದಂಪತಿ ಬಳಿಕ ಅವರಿಂದಲೇ ಉಪಾಯವಾಗಿ ಹೆಚ್ಚು ಹಣಗಳನ್ನು ಪಡೆದು, ಜ್ಯೋತಿಷ್ಯದ ಕಥೆ ಕಟ್ಟಿ ಒಂದು ಸ್ಥಳ ಬಿಟ್ಟು ಮತ್ತೊಂದು ಸ್ಥಳಕ್ಕೆ ಪರಾರಿಯಾಗುತ್ತಿದ್ದರು.

ದಂಪತಿ ವಿರುದ್ಧ ಪಶ್ಚಿಮ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಜಾಮೀನಿನ ಮೂಲಕ ದಂಪತಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಇದೀಗ ವಂಚಕ ದಂಪತಿಯನ್ನು ಹೆಚ್.ಎ.ಎಲ್ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read