alex Certify ಟೊಮೆಟೋ ಮಾತ್ರವಲ್ಲ ಕಳೆದೊಂದು ವರ್ಷದಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿದೆ ಹಾಲಿನ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೋ ಮಾತ್ರವಲ್ಲ ಕಳೆದೊಂದು ವರ್ಷದಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿದೆ ಹಾಲಿನ ಬೆಲೆ….!

ಹಣದುಬ್ಬರದಿಂದಾಗಿ ದೇಶದಾದ್ಯಂತ ಜಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಬದುಕು ದುಸ್ತರವಾಗಿದೆ. ಕೆಲ ದಿನಗಳಿಂದ ಟೊಮೇಟೊ, ಹಸಿರು ತರಕಾರಿಗಳ ಬೆಲೆ ಗಗನ ಮುಟ್ಟಿತ್ತು. ಮತ್ತೊಂದೆಡೆ ಹಾಲಿನ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಹಾಲಿನ ದರವು ಶೇಕಡಾ 10 ರಷ್ಟು ಹೆಚ್ಚಾಗಿದೆ.

ಈ ವರ್ಷದ ಜೂನ್‌ನಲ್ಲಿ, ಟೋನ್ಡ್ ಹಾಲಿನ ಬೆಲೆಗಳು ಹಿಂದಿನ ವರ್ಷಕ್ಕಿಂತ ಅಂದರೆ ಜೂನ್ 2022 ಕ್ಕಿಂತ 9 ಪ್ರತಿಶತ ಹೆಚ್ಚಾಗಿವೆ. ಆದರೆ ಪೂರ್ಣ ಕೆನೆ ಹಾಲಿನ ಬೆಲೆಗಳು ಜೂನ್ 2023 ರಲ್ಲಿ ಹಿಂದಿನ ವರ್ಷಕ್ಕಿಂತ 10 ಪ್ರತಿಶತ ಹೆಚ್ಚಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಲಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುವ ಸಂದರ್ಭದಲ್ಲಿ ಈ ವಿವರಗಳನ್ನು ನೀಡಿದ್ದಾರೆ.

ಆದರೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಿಂದ ಬಂದಿರುವ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಿಂದ ಹಾಲಿನ ದರದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಆದಾಗ್ಯೂ, ಕಳೆದ ಒಂದು ವರ್ಷದ ಅಂಕಿಅಂಶಗಳು ವಿಭಿನ್ನ ಚಿತ್ರಣವನ್ನು ನೀಡುತ್ತವೆ. ಜೂನ್ 2022 ರಲ್ಲಿ, ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ 47.4 ರೂಪಾಯಿ ಇತ್ತು. ಈಗ ಟೋನ್ಡ್ ಹಾಲು ಲೀಟರ್‌ಗೆ 51.6 ರೂಪಾಯಿ ಆಗಿದೆ. ಈ ಮೂಲಕ ಒಂದು ವರ್ಷದಲ್ಲಿ ಟೋನ್ಡ್ ಹಾಲಿನ ಬೆಲೆ ಶೇ.8.86ರಷ್ಟು ಏರಿಕೆಯಾಗಿದೆ.

ಮತ್ತೊಂದೆಡೆ, ಪೂರ್ಣ ಕೆನೆ ಹಾಲಿನ ದರ ಜೂನ್ 2022 ರಲ್ಲಿ ಪ್ರತಿ ಲೀಟರ್‌ಗೆ 58.8 ರೂಪಾಯಿ ಇದ್ದಿದ್ದು, 2023ರಲ್ಲಿ 64.6 ರೂಪಾಯಿಗೆ ಏರಿಕೆಯಾಗಿದೆ. ಆದರೆ ಹಾಲಿನ ದರ ನಿಯಂತ್ರಣ ಸರ್ಕಾರದ ಕೈಯ್ಯಲ್ಲಿಲ್ಲ. ಇದರ ಬೆಲೆಗಳನ್ನು ಸಹಕಾರಿ ಮತ್ತು ಖಾಸಗಿ ಡೈರಿಗಳು, ಅವುಗಳ ವೆಚ್ಚ ಮತ್ತು ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಗದಿಪಡಿಸುತ್ತವೆ.

ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಹಲವು ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹಲವು ನಗರಗಳಲ್ಲಿ ಟೊಮೇಟೊ ಕೆಜಿಗೆ 200 ರೂಪಾಯಿಯ ಗಡಿ ದಾಟಿತ್ತು. ಹಸಿರು ತರಕಾರಿಗಳ ಬೆಲೆಯೂ ಗಗನಮುಟ್ಟಿದೆ. ಸಾಂಬಾರ ಪದಾರ್ಥಗಳು ಕೂಡ ದುಬಾರಿಯಾಗಿವೆ. ಇನ್ನು 1-2 ತಿಂಗಳಲ್ಲಿ ಈರುಳ್ಳಿ ಬೆಲೆ ದ್ವಿಗುಣಗೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...