ನವದೆಹಲಿ: ಯಾರೊಂದಿಗಾದರೂ ದೈಹಿಕ ಸಂಬಂಧವನ್ನು ಸ್ಥಾಪಿಸುವ ವ್ಯಕ್ತಿ ಅವನ/ಅವಳ ಗುರುತನ್ನು ಮರೆ ಮಾಚಿದಲ್ಲಿ ಹೊಸ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮಸೂದೆ, ಭಾರತೀಯ ಸಾಕ್ಷ್ಯ ಮಸೂದೆ ಮತ್ತು ಭಾರತೀಯ ನಾಗರಿಕ ರಕ್ಷಣಾ ಮಸೂದೆಗಳನ್ನು ಮಂಡಿಸಿದ ಅವರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಅಪರಾಧ ಎಸಗುವವರಿಗೆ ಶಿಕ್ಷೆಯನ್ನು ಹೆಚ್ಚು ಕಠಿಣಗೊಳಿಸಲು ನಿಬಂಧನೆಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.