ಇಸ್ರೋ ಮತ್ತೊಂದು ಮೈಲಿಗಲ್ಲು: ಗಗನಯಾನ ಮಿಷನ್ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶುಕ್ರವಾರ ಡ್ರಾಗ್ ಪ್ಯಾರಾಚೂಟ್‌ ಗಳ ಮೇಲೆ ಸರಣಿ ಪರೀಕ್ಷೆಗಳನ್ನು ನಡೆಸಿದೆ.

ಇದು ಯೋಜಿತ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯಲ್ಲಿ ಮರು-ಪ್ರವೇಶದ ಸಮಯದಲ್ಲಿ ಸಿಬ್ಬಂದಿ ಮಾಡ್ಯೂಲ್ ಅನ್ನು ಸ್ಥಿರಗೊಳಿಸಲು ಮತ್ತು ಅದರ ವೇಗವನ್ನು ಸುರಕ್ಷಿತ ಮಟ್ಟಕ್ಕೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಗಗನಯಾನ ಮಿಷನ್ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಮತ್ತು ಹಿಂದಕ್ಕೆ ಸಾಗಿಸಲು ಆಶಿಸುತ್ತಿದೆ. ವೇಗವನ್ನು ಕಡಿಮೆ ಮಾಡಲು ಮತ್ತು ವೇಗವಾಗಿ ಚಲಿಸುವ ವಸ್ತುಗಳನ್ನು ಸ್ಥಿರಗೊಳಿಸಲು ಡ್ರಾಗ್ ಪ್ಯಾರಾಚೂಟ್‌ ಗಳನ್ನು ನಿಯೋಜಿಸಲಾಗಿದೆ.

ಇಸ್ರೋದ ತಿರುವನಂತಪುರಂ ಮೂಲದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ) ಆಗಸ್ಟ್ 8-10ರ ಅವಧಿಯಲ್ಲಿ ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್(ಆರ್‌ಟಿಆರ್‌ಎಸ್) ಸೌಲಭ್ಯದಲ್ಲಿ ಡ್ರೋಗ್ ಪ್ಯಾರಾಚೂಟ್ ನಿಯೋಜನೆ ಪರೀಕ್ಷೆಗಳ ಸರಣಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE)/DRDO ಸಹಯೋಗದಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read