ಭಾರತಕ್ಕೆ ಎಂಟ್ರಿ ಕೊಟ್ಟಿದೆ ಡುಕಾತಿಯ ಸೂಪರ್‌ ಬೈಕ್‌; ದಂಗುಬಡಿಸುವಂತಿದೆ ಇದರ ಬೆಲೆ ಮತ್ತು ವಿಶೇಷತೆ!

ಡುಕಾತಿ ಕಂಪನಿಯ ಮತ್ತೊಂದು ಹೊಸ ಬೈಕ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಡುಕಾತಿ ಡಯಾವೆಲ್‌ ವಿ4 ಬೈಕ್‌ನ ಆರಂಭಿಕ ಬೆಲೆ 25.91 ಲಕ್ಷ ರೂಪಾಯಿ. ಹೊಸ ಡಿಯಾವೆಲ್ V4 ನವದೆಹಲಿ, ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಚಂಡೀಗಢದ ಎಲ್ಲಾ ಡುಕಾತಿ ಸ್ಟೋರ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಡಯಾವೆಲ್ ವಿ4 ವಿನ್ಯಾಸವನ್ನು ಬದಲಾಯಿಸಿಲ್ಲ.

ಇದು ಫುಟ್‌ಪೆಗ್‌ಗಳನ್ನು ಸ್ವಲ್ಪ ಮುಂದಕ್ಕೆ ಅಡ್ಜಸ್ಟ್‌ ಮಾಡಲಾಗಿದೆ. ಉದ್ದ ಮತ್ತು ಅಗಲವಾದ ಹ್ಯಾಂಡಲ್‌ಬಾರ್ ಈ ಬೈಕ್‌ನ ವಿಶೇಷತೆ. ಡುಕಾತಿ ಡಯಾವೆಲ್ ವಿ4 ಅನ್ನು ರೆಡ್ ಮತ್ತು ಥ್ರಿಲ್ಲಿಂಗ್ ಬ್ಲ್ಯಾಕ್ ಬಣ್ಣಗಳಲ್ಲಿ ಲಾಂಚ್‌ ಮಾಡಲಾಗಿದೆ. ಇದು ಸ್ವಲ್ಪ ಪರಿಷ್ಕೃತ ಹೆಡ್‌ಲ್ಯಾಂಪ್ ಕ್ಲಸ್ಟರ್, ಸಿಂಗಲ್-ಸೈಡೆಡ್ ಸ್ವಿಂಗರ್ಮ್, ಒಂದು ಬದಿಯಲ್ಲಿ ಕ್ವಾಡ್-ಟಿಪ್ ಎಕ್ಸಾಸ್ಟ್, ಫ್ಲೋಟಿಂಗ್ ಟೈಲ್ ವಿಭಾಗ, ಮಸ್ಕ್ಯುಲರ್ 20-ಲೀಟರ್ ಇಂಧನ ಟ್ಯಾಂಕ್, ಉತ್ತಮ ಏರೋಡೈನಾಮಿಕ್ಸ್‌ಗಾಗಿ ಏರ್ ವೆಂಟ್‌ಗಳು ಮತ್ತು 240/45 ಹಿಂದಿನ ಟೈರ್ ಅನ್ನು ಹೊಂದಿದೆ.

ಡಯಾವೆಲ್ ವಿ4 ಪೂರ್ಣ-ಎಲ್ಇಡಿ ಲೈಟಿಂಗ್, 5-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಡುಕಾಟಿ ಲಿಂಕ್ ಅಪ್ಲಿಕೇಶನ್ ಬ್ಲೂಟೂತ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಹೀಗೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ವೀಲಿ ಕಂಟ್ರೋಲ್, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಕ್ರೂಸ್ ಕಂಟ್ರೋಲ್ ಮತ್ತು ಪವರ್ ಲಾಂಚ್ ಅನ್ನು ಕೂಡ ಈ ಬೈಕ್‌ನಲ್ಲಿ ಅಳವಡಿಸಲಾಗಿದೆ.

ಜೊತೆಗೆ ಇದು ಮೂರು ಪವರ್ ಮೋಡ್‌ಗಳು ಮತ್ತು ನಾಲ್ಕು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ – ಸ್ಪೋರ್ಟ್, ಟೂರಿಂಗ್, ವೆಟ್ ಮತ್ತು ಅರ್ಬನ್. ಹೊಸ V4 GranTurismo ಎಂಜಿನ್‌ನ ಇದರ ಮತ್ತೊಂದು ವಿಶೇಷತೆ. ಇದು ಈಗಾಗಲೇ Panigale, Streetfighter ಮತ್ತು Multistrada ನಂತಹ ಇತರ ಡುಕಾತಿ ಮಾದರಿಗಳಿಗೆ ಪವರ್‌ ನೀಡಬಲ್ಲದು. ಎಂಜಿನ್‌ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read