ವಿಜಯ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾ ಟಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಂದು ಖುಷಿ ಚಿತ್ರ ತಂಡ ಟ್ರೈಲರ್ ರಿಲೀಸ್ ಮಾಡುವ ಮೂಲಕ ಪಾತ್ರಗಳ ಪರಿಚಯ ಮಾಡಿಸಿದೆ.
ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಮೈತ್ರಿ ಮೂವಿ ಮೇಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ತೆಲುಗು ಸೇರಿದಂತೆ ತಮಿಳು, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಟ್ರೈಲರ್ ಬಿಡುಗಡೆಯಾಗಿದೆ.
ಶಿವನಿರ್ವಾಣ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಮುರಳಿ ಶರ್ಮ, ವೆನಿಲ್ಲಾ ಕಿಶೋರ್, ಲಕ್ಷ್ಮಿ, ರೋಹಿಣಿ, ಜಯರಾಮ್, ರಾಹುಲ್ ರಾಮಕೃಷ್ಣ ಸೇರಿದಂತೆ ಮೊದಲಾದ ತಾರಾ ಬಳಗವಿದೆ. ಮೈತ್ರಿ ಮೂವಿ ಮೇಕರ್ಸ್ ಲಾಂಛನದಲ್ಲಿ ನವೀನ್ ಹಾಗೂ ರವಿಶಂಕರ್ ನಿರ್ಮಾಣ ಮಾಡಿದ್ದು, ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ನೀಡಿದ್ದಾರೆ.