ಮಲಯಾಳಂ ಚಲನಚಿತ್ರ ನಿರ್ದೇಶಕ ಸಿದ್ದಿಕ್ ಗೆ ಹೃದಯಾಘಾತವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.ಹೃದಯಾಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ, ಅವರು ಪ್ರಸ್ತುತ ಕೊಚ್ಚಿ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ ಪ್ರಕಾರ, ಸಿದ್ದೀಕ್ ನ್ಯುಮೋನಿಯಾ ಮತ್ತು ಪಿತ್ತಜನಕಾಂಗದ ಕಾಯಿಲೆಯಿಂದಾಗಿ ವೈದ್ಯಕೀಯ ಆರೈಕೆಯಲ್ಲಿದ್ದರು ಎಂದು ತಿಳಿದು ಬಂದಿದೆ.ಸಿದ್ದಿಕ್ 1989 ರಲ್ಲಿ ಮಲಯಾಳಂ ಚಿತ್ರ ‘ರಾಮ್ಜಿ ರಾವ್ ಸ್ಪೀಕಿಂಗ್’ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರು ೧೯೮೬ ರಲ್ಲಿ ಮಲಯಾಳಂ ಚಿತ್ರ ‘ಪಪ್ಪನ್ ಪ್ರಿಯಪ್ಪಟ್ಟ ಪಪ್ಪನ್’ ಮೂಲಕ ಚಿತ್ರಕಥೆಗಾರರಾಗಿ ಪಾದಾರ್ಪಣೆ ಮಾಡಿದರು. ದೊಡ್ಡ ಪರದೆಗೆ ಬಂದ ಅವರ ಕೊನೆಯ ಚಿತ್ರ ‘ಬಿಗ್ ಬ್ರದರ್’ ಆಗಿದೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್ ನೀಡಿದೆ. ಈ ಬೆನ್ನಲ್ಲೇ ಮಲೆಯಾಳಂ ಚಲನಚಿತ್ರ ನಿರ್ದೇಶಕ ಸಿದ್ದಿಕ್ ಗೆ ಹೃದಯಾಘಾತವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.