ಬೆಂಗಳೂರು ನಗರ ಜಿಲ್ಲೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಸಿಬಂದ್ದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಘಟಕ ಆಡಳಿತಾಧಿಕಾರಿಗಳು (4ಹುದ್ದೆ), ಆಪ್ತ ಸಮಾಲೋಚಕರು (4 ಹುದ್ದೆ), ಸಮಾಜ ಸೇವಾ ಕಾರ್ಯಕರ್ತೆಯರು (8 ಹುದ್ದೆ), ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್) (8 ಹುದ್ದೆ), ವಿವಿದೋದ್ದೇಶ ಸ್ವಚ್ಛತಗಾರರು (8 ಹುದ್ದೆ) ಗೆ ಆಯ್ಕೆ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಘಟಕ ಆಡಳಿತಾಧಿಕಾರಿಗಳ ಹುದ್ದೆಗೆ ಅಭ್ಯರ್ಥಿಯು ಎಂ.ಎಸ್.ಡಬ್ಲ್ಯೂ/ಸ್ನಾತಕೋತ್ತರ ಕಾನೂನು ಪದವಿ /ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವಲಪ್ ಮೆಂಟ್ ಮತ್ತು ಫ್ಯಾಮಿಲಿ ರಿಲೇಶನ್) ಎಂ.ಎಸ್.ಸಿ. ಸೈಕಾಲಜಿ/ ಎಂ.ಎಸ್.ಸಿ ಸೈಕ್ರಿಯಾಟ್ರಿ. ಪದವಿದಾರರಾಗಿರಬೇಕು. ಆಪ್ತ ಸಮಾಲೋಚಕ ಹುದ್ದೆಗೆ ಅಭ್ಯರ್ಥಿಯು ಎಂ.ಎಸ್.ಡಬ್ಲ್ಯೂ/ಸ್ನಾತಕೋತ್ತರ ಕಾನೂನು ಪದವಿ /ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವಲಪ್ ಮೆಂಟ್ ಮತ್ತು ಫ್ಯಾಮಿಲಿ ರಿಲೇಶನ್) ಎಂ.ಎಸ್.ಸಿ. ಸೈಕಾಲಜಿ/ ಎಂ.ಎಸ್.ಸಿ ಸೈಕ್ರಿಯಾಟ್ರಿ. ಪದವಿದಾರರಾಗಿರಬೇಕು. ಸಮಾಜ ಸೇವಾ ಕಾರ್ಯಕರ್ತೆರ ಹುದ್ದೆಗೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೋಷಿಯಾಲಜಿ, ಮಹಿಳಾ ಅಧ್ಯ್ಯನ), ವಕೀಲರು ಕಾನೂನು ಪದವಿ ಹೊಂದಿರಬೇಕು ಹಾಗೂ ವಿವಿದೋದ್ದೇಶ ಸ್ವಚ್ಛತಗಾರರು 7ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ 18 ರಿಂದ 45 ವರ್ಷ ವಯೋಮಿತಿಯಾವರಾಗಿರಬೇಕು. ಆಸಕ್ತಿಯುಳ್ಳಜ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸೆಪ್ಟೆಂಬರ್ 5 ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರ (resume) ಹಾಗೂ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ. ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ 080-29578688 ಮೂಲಕ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.