HomeKarnataka6 ಪ್ರಯಾಣಿಕರನ್ನು ಬಿಟ್ಟು ಮಂಗಳೂರಿಗೆ ಹಾರಿದ ಇಂಡಿಗೋ ವಿಮಾನ

6 ಪ್ರಯಾಣಿಕರನ್ನು ಬಿಟ್ಟು ಮಂಗಳೂರಿಗೆ ಹಾರಿದ ಇಂಡಿಗೋ ವಿಮಾನ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ 6 ಪ್ರಯಾಣಿಕರನ್ನು ಬಿಟ್ಟು ಇಂಡಿಗೋ ವಿಮಾನ ಮಂಗಳೂರಿಗೆ ಹಾರಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ 6E 6162 ವಿಮಾನದ ಟಿಕೆಟ್ ಬುಕ್ ಮಾಡಿದ್ದ 6 ಪ್ರಯಾಣಿಕರು ಕೆ.ಐ.ಎದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರು. ಆದರೆ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ ಮೊದಲೇ ಟೇಕ್ ಆಫ್ ಆಗಿದೆ. ವಿಮಾನ 12 ನಿಮಿಷ ಮೊದಲೇ ಮಂಗಳೂರಿಗೆ ಟೇಕ್ ಆಫ್ ಆಗಿದ್ದು, 6 ಪ್ರಯಾಣಿಕರು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಪ್ರಯಾಣಿಕರು ಇಂಡಿಗೋ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಬಳಿಕ ಸಂಸ್ಥೆ ಬೇರೆ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಕರನ್ನು ಕಳುಹಿಸಿಕೊಟ್ಟಿದೆ.

ಸರ್ಕಾರಿ ಅಧಿಕಾರಿಯೂ ಆಗಿರುವ ಪ್ರಯಾಣಿಕರೊಬ್ಬರು ಹೇಳುವ ಪ್ರಕಾರ ಇಂಡಿಗೋ ವಿಮಾನ ಶುಕ್ರವಾರ ಮಧ್ಯಾಹ್ನ 2:55ಕ್ಕೆ ಹೊರಡಬೇಕಿತ್ತು. ಆದರೆ 2:43ಕ್ಕೆ ಟೇಕ್ ಆಫ್ ಆಗಿದೆ. ಮಂಗಳೂರಿಗೆ ತೆರಳಬೇಕಿದ್ದ 6 ಪ್ರಯಾಣಿಕರನ್ನು ಬಿಟ್ಟು ವಿಮಾನ ಹೊರಟಿದೆ. ಇಂಡಿಗೋ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಸ್ಥೆ ರಾತ್ರಿ 8:20ಕ್ಕೆ ಹೊರಡುವ ವಿಮಾನದಲ್ಲಿ ತೆರಳಲು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿ ಮಂಗಳೂರಿಗೆ ಕಳುಹಿಸಿಕೊಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular