ವೆಸ್ಟ್ ಇಂಡೀಸ್ ಎದುರು ಏಕದಿನ ಸರಣಿಯನ್ನು ಗೆದ್ದಿದ್ದ ಭಾರತ ತಂಡ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಸೋಲನುಭವಿಸಿದೆ ಸಿಕ್ಸರ್ ಸಿಡಿಸುವಲ್ಲಿ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಗೆ ತತ್ತರಿಸಿ ಹೋಗಿದೆ ಇನ್ನೂ ನಾಲ್ಕು ಟಿ ಟ್ವೆಂಟಿ ಪಂದ್ಯಗಳು ಉಳಿದಿದ್ದು ಭಾರತ ತಂಡ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ನಾಳೆ ಗುಯಾನದಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಭಾರತದ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಪ್ರಸಾರವಾಗಲಿದೆ. ಈ ಸರಣಿಯ ಬಳಿಕ ಐರ್ಲೆಂಡ್ ಜೊತೆ ಮತ್ತೊಂದು ಟೀ ಟ್ವೆಂಟಿ ಸರಣಿಗೆ ಭಾರತ ಸಜ್ಜಾಗಲಿದೆ