ಬಿಳಿ ಉಪ್ಪಿಗಿಂತ ಕಪ್ಪು ಉಪ್ಪು ಅಥವಾ ಬ್ಲಾಕ್ ಸಾಲ್ಟ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಬ್ಲಾಕ್ ಸಾಲ್ಟ್ ಅನ್ನು ರಾಯತ, ಸಲಾಡ್, ಪಾನೀಯಗಳು ಮತ್ತು ಫ್ರೂಟ್ ಸಲಾಡ್‌ಗಳಲ್ಲಿ ಬಳಸಲಾಗುತ್ತದೆ, ಇದು ರುಚಿಯನ್ನು ಹೆಚ್ಚಿಸುತ್ತದೆ. ಆಹಾರ ತಜ್ಞರ ಪ್ರಕಾರ ಬ್ಲಾಕ್ ಸಾಲ್ಟ್ ಬೆರೆಸಿದ ನೀರನ್ನು ಕುಡಿಯುವುದು ಇನ್ನೂ ಉತ್ತಮ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳು ಕಪ್ಪು ಉಪ್ಪಿನಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.ಪ್ರತಿದಿನ ಕಪ್ಪು ಉಪ್ಪು ಬೆರೆಸಿದ ನೀರು ಕುಡಿಯುತ್ತಿದ್ದರೆ ಆರೋಗ್ಯಕ್ಕೆ ಸಾಕಷ್ಟು ಲಾಭವಾಗುತ್ತದೆ.
ಮಧುಮೇಹಕ್ಕೆ ಪರಿಹಾರ – ಬಿಳಿ ಉಪ್ಪಿನಲ್ಲಿ ಸೋಡಿಯಂ ಅಧಿಕವಾಗಿರುವ ಕಾರಣ ಮಧುಮೇಹ ರೋಗಿಗಳಿಗೆ ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ. ಇವೆರಡೂ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ. ಆದರೆ ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕಾಗಿ ಬ್ಲಾಕ್ ಸಾಲ್ಟ್ ಬೆರೆಸಿದ ನೀರನ್ನು ಕುಡಿಯಬೇಕು.
ಜೀರ್ಣಕ್ರಿಯೆಯಲ್ಲಿ ಸಹಕಾರಿ – ಪ್ರತಿದಿನ ಬೆಳಗ್ಗೆ ಕಪ್ಪು ಉಪ್ಪು ಬೆರೆಸಿದ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಏಕೆಂದರೆ ಇದು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರೋಟೀನ್-ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಗ್ಯಾಸ್ ಮತ್ತು ಆಸಿಡಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.
ಕೂದಲಿನ ಆರೋಗ್ಯ – ಬ್ಲಾಕ್ ಸಾಲ್ಟ್ ಎಫ್ಫೋಲಿಯೇಟಿಂಗ್ ಮತ್ತು ಕ್ಲೆನ್ಸಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನೆತ್ತಿ ಮತ್ತು ಕೂದಲನ್ನು ಸ್ವಚ್ಛಗೊಳಿಸುತ್ತದೆ. ಇದರಿಂದಾಗಿ ಕೂದಲಿನ ಸೌಂದರ್ಯ ಹಾಗೂ ಗುಣಮಟ್ಟ ಹೆಚ್ಚಾಗುತ್ತದೆ.
ತೂಕ ಇಳಿಕೆ – ಭಾರತದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಲೇ ಇದೆ. ಹೆಚ್ಚುತ್ತಿರುವ ತೂಕದಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ. ಏಕೆಂದರೆ ಸ್ಥೂಲಕಾಯತೆಯು ಹಲವು ರೋಗಗಳಿಗೆ ಕಾರಣವಾಗುತ್ತದೆ. ಬ್ಲಾಕ್ ಸಾಲ್ಟ್ ಬೆರೆಸಿದ ನೀರಿನಲ್ಲಿ ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಇದರಿಂದಾಗಿ ಹೆಚ್ಚುತ್ತಿರುವ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.