alex Certify ಇಲ್ಲಿದೆ 64ನೇ ವಯಸ್ಸಿನಲ್ಲಿ 42 ಸಾವಿರ ಕೋಟಿ ರೂ. ಗಳಿಸಿದ ‘ಬಾರ್ಬಿ ಡಾಲ್’ ಇಂಟ್ರಸ್ಟಿಂಗ್ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 64ನೇ ವಯಸ್ಸಿನಲ್ಲಿ 42 ಸಾವಿರ ಕೋಟಿ ರೂ. ಗಳಿಸಿದ ‘ಬಾರ್ಬಿ ಡಾಲ್’ ಇಂಟ್ರಸ್ಟಿಂಗ್ ಕಥೆ

ಬಾಲ್ಯದ ಆಟಿಕೆಗಳಲ್ಲಿ ಬಾರ್ಬಿ ಗೊಂಬೆ ಅತ್ಯಂತ ಜನಪ್ರಿಯವಾಗಿದೆ. ದಶಕಗಳಿಂದಲೂ ಹೆಸರು ಮಾಡಿರುವ ಆಟಿಕೆ ಇದು. ಹತ್ತಾರು ಅವತಾರಗಳಲ್ಲಿ ಬಾರ್ಬಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರತಿ ಮನೆಯಲ್ಲಿ ಕನಿಷ್ಠ ಒಂದಾದರೂ ಬಾರ್ಬಿ ಗೊಂಬೆ ಇರುತ್ತಿತ್ತು. ಆದರೆ ತಂತ್ರಜ್ಞಾನ ಬದಲಾದಂತೆ ಬಾರ್ಬಿಯ ಮಾರಾಟ ಕಡಿಮೆಯಾಗತೊಡಗಿತು. ಆದರೂ ಮಕ್ಕಳಲ್ಲಿ ಬಾರ್ಬಿ ಕ್ರೇಜ್ ಹಾಗೇ ಇದೆ. ಇದಕ್ಕೆ ಸಾಕ್ಷಿಯೆಂದರೆ ಇತ್ತೀಚೆಗೆ ಬಿಡುಗಡೆಯಾದ ಹಾಲಿವುಡ್‌ನ ಬಾರ್ಬಿ ಚಿತ್ರದ ಯಶಸ್ಸು. ಈ ಚಿತ್ರ ಈಗಾಗ್ಲೇ ಕೋಟಿ ಕೋಟಿ ಗಳಿಕೆ ಮಾಡಿದೆ.

ಜಗತ್ತಿಗೆ ಬಾರ್ಬಿ ಗೊಂಬೆಯನ್ನು ಕೊಟ್ಟವರು ಯಾರು ? 

ಫ್ಯಾಶನ್ ಆಟಿಕೆ ಬಾರ್ಬಿಯನ್ನು ಜಗತ್ತಿಗೆ ನೀಡಿದ ಕಂಪನಿಯ ಹೆಸರು ಮ್ಯಾಟೆಲ್. ಪ್ರಸ್ತುತ ಇದು ಆಟಿಕೆ ವಲಯದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಕಂಪನಿಯಾಗಿದೆ. ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಇದು ಗ್ರಾಹಕರನ್ನು ಹೊಂದಿದ್ದು, 42 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಮ್ಯಾಟೆಲ್ ಕಂಪನಿ 1945 ರಲ್ಲಿ ಪ್ರಾರಂಭವಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ರೂತ್ ಮತ್ತು ಎಲಿಯಟ್ ಹ್ಯಾಂಡ್ಲರ್‌ ಇದರ ಸೃಷ್ಟಿಕರ್ತರು.

ತನ್ನ ಮಗಳನ್ನು ನೋಡಿದ ರೂತ್‌ಗೆ ಅದೇ ರೀತಿಯ ಗೊಂಬೆ ತಯಾರಿಸುವ ಆಲೋಚನೆ ಬಂದಿತ್ತು. ಆಕೆಯ ಹೆಸರು ಬಾರ್ಬರಾ. ಹಾಗಾಗಿ ಈ ಗೊಂಬೆಗೆ ‘ಬಾರ್ಬಿ’ ಎಂದು ನಾಮಕರಣ ಮಾಡಿದ್ರು. ಬಾರ್ಬಿ ಗೊಂಬೆಯು ಮ್ಯಾಟೆಲ್‌ಗೆ ವಿಶ್ವಾದ್ಯಂತ ಮನ್ನಣೆಯನ್ನು ತಂದುಕೊಟ್ಟಿತು. 1959ರಲ್ಲಿ ಮೊದಲ ಬಾರಿ ಬಾರ್ಬಿ ಗೊಂಬೆಯನ್ನು ಜಗತ್ತಿಗೆ ಪರಿಚಯಿಸಲಾಯ್ತು. ಮೊದಲ ಬಾರ್ಬಿ ಗೊಂಬೆ ಚಿನ್ನ ಮತ್ತು ಕಂದು ಬಣ್ಣದಲ್ಲಿತ್ತು.

ಅದಾದ 1961 ರಲ್ಲಿ, ಮ್ಯಾಟೆಲ್ ಬಾರ್ಬಿಯ ಗೆಳೆಯ ಬೆನ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಬಾರ್ಬಿಯ ಅತ್ಯುತ್ತಮ ಸ್ನೇಹಿತ ಮಿಡ್ಜ್ ಅನ್ನು 1963 ರಲ್ಲಿ ಪ್ರಾರಂಭಿಸಲಾಯಿತು. ಒಂದು ವರ್ಷದ ನಂತರ ಅಂದರೆ 1964 ರಲ್ಲಿ ಬಾರ್ಬಿಯ ಕಿರಿಯ ಸಹೋದರಿ ಸ್ಕಿಪ್ಪರ್ ಅನ್ನು ಮಾರುಕಟ್ಟೆಗೆ ಬಂದಿತು. ಬಾರ್ಬಿಯು ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳು, ಸುಂದರ ದೇಹ ಎಲ್ಲರನ್ನೂ ಆಕರ್ಷಿಸುತ್ತದೆ. ಮಕ್ಕಳಿಗಿಂತ ಹದಿಹರೆಯದವರಲ್ಲಿ ಬಾರ್ಬಿ ಕ್ರೇಝ್‌ ಹೆಚ್ಚಿದೆ. ಯುವತಿಯರು ಈಗಲೂ ಬಾರ್ಬಿಯಂತೆ ಡ್ರೆಸ್‌ ಮಾಡಿಕೊಳ್ಳಲು ಇಷ್ಟಪಡುತ್ತಾರೆ.

ಬಾರ್ಬಿ ಗೊಂಬೆಗೆ ಅನೇಕ ರೀತಿಯಲ್ಲಿ ವಿರೋಧವೂ ವ್ಯಕ್ತವಾಗಿದ್ದವು. ಮಹಿಳಾ ಸಂಘಟನೆಗಳು ಇದನ್ನು ವಿರೋಧಿಸಿದವು. ಇದಾದ ನಂತರ ಬಾರ್ಬಿ ಕಪ್ಪು ರೂಪದಲ್ಲಿ ಬಂದಿತ್ತು. ಆರ್ಮ್‌ಸ್ಟ್ರಾಂಗ್ ಚಂದ್ರನಲ್ಲಿಗೆ ಹೋಗುವ ನಾಲ್ಕು ವರ್ಷಗಳ ಮೊದಲು, ಬಾರ್ಬಿ ಗಗನಯಾತ್ರಿಗಳ ಅವತಾರದಲ್ಲಿ ಬಂದಿತ್ತು. 80ರ ದಶಕದ ನಂತರ  ಮಕ್ಕಳ ಜಗತ್ತಿನಲ್ಲಿ ಆಟಿಕೆಗಳ ಪ್ರಾಮುಖ್ಯತೆ ಕಡಿಮೆಯಾಗತೊಡಗಿತು.

2000ನೇ ಇಸ್ವಿಯ ನಂತರ ಮಕ್ಕಳು ಆಟಿಕೆಗಳೊಂದಿಗೆ ಆಡುವುದನ್ನೇ ಬಹುತೇಕ ನಿಲ್ಲಿಸಿದರು. ಈಗ ಮಕ್ಕಳು ಆಟಿಕೆಗಳ ಬದಲಿಗೆ ವಿಡಿಯೋ ಗೇಮ್‌ಗಳನ್ನು ಆಡ್ತಾರೆ. 2017 ರಲ್ಲಿ ಮ್ಯಾಟೆಲ್ ಮತ್ತೊಮ್ಮೆ ಬಾರ್ಬಿಯನ್ನು ರಿ ಲಾಂಚ್‌ ಮಾಡಿದೆ. ಇದರಿಂದಾಗಿ ಬಾರ್ಬಿಯ ಮಾರಾಟವು ಸುಧಾರಿಸಿದೆ, ಆದರೆ ಕ್ರೇಝ್‌ ಮೊದಲಿನಂತಿಲ್ಲ. ಈಗ ಬಿಡುಗಡೆಯಾಗಿರೋ ಸಿನೆಮಾ ಮತ್ತೆ ಬಾರ್ಬಿ ಬಗ್ಗೆ ಜನರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...