alex Certify ಮನೆಯಲ್ಲಿ ಹಣವನ್ನು ಸುರಕ್ಷಿತವಾಗಿರಿಸುವುದು ಹೇಗೆ…..? ಕ್ಯಾಶ್‌ ಇಡಲು ಇಲ್ಲಿದೆ ಟಿಪ್ಸ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಹಣವನ್ನು ಸುರಕ್ಷಿತವಾಗಿರಿಸುವುದು ಹೇಗೆ…..? ಕ್ಯಾಶ್‌ ಇಡಲು ಇಲ್ಲಿದೆ ಟಿಪ್ಸ್‌…..!

ಮನೆಯಲ್ಲಿ ಅನೇಕರು ಸಾವಿರಾರು ರೂಪಾಯಿ ನಗದು ಹಣವನ್ನು ಇಟ್ಟುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಬೇಕು ಎನ್ನುವ ಕಾರಣಕ್ಕೆ ನಗದನ್ನು ತಂದಿಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ನಗದನ್ನು ಸುರಕ್ಷಿತವಾಗಿ ಇಡುವುದು ಹೇಗೆ ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು.

ಪ್ರಸ್ತುತ ಎಲ್ಲಾ ಕಡೆ ಡಿಜಿಟಲ್ ಹಣದ ವಹಿವಾಟು ಜೋರಾಗಿದೆ. ದೊಡ್ಡ ವಹಿವಾಟುಗಳು ಕೂಡ ಆನ್‌ಲೈನ್‌ ಮೂಲಕ ನಡೆಯುತ್ತವೆ. ಜನರಿಗೆ ಇದು ತುಂಬಾ ಸುಲಭ ಮತ್ತು ತ್ವರಿತವಾಗಿ ಆಗುತ್ತದೆ. ಆದರೂ ಜನರು ಮನೆಯಲ್ಲಿ ಹೆಚ್ಚು ಹಣವನ್ನು ಇಟ್ಟುಕೊಂಡಿರ್ತಾರೆ. ಹಣವನ್ನು ಮನೆಯಲ್ಲಿ ಇಡುವುದು ಸುರಕ್ಷಿತವಲ್ಲ. ಕಳ್ಳತನದಿಂದ ಅಪಾರ ನಷ್ಟವಾಗುವ ಸಾಧ್ಯತೆಯಿರುತ್ತದೆ. ಮನೆಯಲ್ಲಿ ಹಣವನ್ನು ಸೇಫ್‌ ಆಗಿ ಇಡುವುದು ಹೇಗೆ ಅನ್ನೋದನ್ನು ನೋಡೋಣ.

ಮನೆಯಲ್ಲಿ ಸುರಕ್ಷಿತವಾಗಿ ಹಣವನ್ನು ಎಲ್ಲಿ ಇಡಬೇಕು?

ಯಾವುದೇ ಇತರ ಕಾಗದದ ತುಂಡುಗಳಂತೆ ನಗದು ಕಳೆದುಹೋಗಬಹುದು, ಒದ್ದೆಯಾಗಬಹುದು, ಸುಟ್ಟು ಹೋಗಬಹುದು ಅಥವಾ ಕಳ್ಳತನವಾಗಬಹುದು. ಹಾಗಾಗಿ ನೋಟುಗಳು ಒದ್ದೆಯಾಗದಂತಹ ಸ್ಥಳದಲ್ಲಿ ಹಣವನ್ನು ಇಡಬೇಕು. ನಗದು ಬೆಂಕಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಿ. ಮನೆಯಲ್ಲಿ ಹಣವನ್ನು ಇರಿಸಿಕೊಳ್ಳಲು ಸೇಫ್‌ ಬಳಸಬೇಕು. ಮನೆಯ ಇತರ ಬೆಲೆಬಾಳುವ ವಸ್ತುಗಳನ್ನು ಕೂಡ ಈ ವಾಲ್ಟ್‌ನಲ್ಲಿ ಸುರಕ್ಷಿತವಾಗಿ ಇಡಬಹುದು.

ಇವುಗಳಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳನ್ನು ಸೇರಿಸಿಕೊಳ್ಳಬಹುದು. ಸೇಫ್‌ನಲ್ಲಿಟ್ಟರೆ ಕಳ್ಳತನದ ಸಂದರ್ಭದಲ್ಲಿ ಅದು ಸಹ ರಕ್ಷಿಸಲ್ಪಡುತ್ತದೆ. ನಿಮ್ಮ ಬಳಿ ಸೇಫ್ ಇಲ್ಲದಿದ್ದರೆ ಮನೆಯ ಬೀರುವಿನಲ್ಲಿ ಹಣವನ್ನು ಲಾಕ್‌ ಮಾಡಿ ಇರಿಸಿ. ಕಬೋರ್ಡ್‌ನ ಲಾಕರ್‌ನಲ್ಲಿ ಹಣವನ್ನು ಸುರಕ್ಷಿತವಾಗಿ ಇಡಬಹುದು. ಆದರೆ ಲಾಕರ್ ಅನ್ನು ಯಾವಾಗಲೂ ಕೀಲಿಯೊಂದಿಗೆ ಲಾಕ್ ಮಾಡಿ. ಆ ಕೀಲಿಯನ್ನು ಪ್ರತ್ಯೇಕವಾಗಿ ಇರಿಸಿ. ನಂತರ ಕಪಾಟನ್ನು ಕೂಡ ಲಾಕ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...