ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವಂತೆ ಗಂಡಸರು ಸಾಮಾನ್ಯವಾಗಿ ವಿಭೂತಿ ಧಾರಣೆ ಮಾಡುತ್ತಾರೆ. ಮೂರು ಅಡ್ಡ ಬಿಳಿಯ ಗೆರೆಗಳ ಹಿಂದೆ ಬಹಳ ದೊಡ್ಡ ತಾತ್ವಿಕ ವಿಚಾರವಿದೆ. ಶಿವನಿಗೆ ವಿಭೂತಿ ಎಂದರೆ ಬಲು ಪ್ರಿಯ.
ನಾವೆಲ್ಲಾ ತಿಳಿದಿರುವ ಹಾಗೆ ಪರಮೇಶ್ವರ ಸ್ಮಶಾನವಾಸಿ. ಅಲ್ಲಿ ಧಾರಾಳವಾಗಿ ಸಿಗುವ ಭಸ್ಮವೆ ಶಿವನ ಅಲಂಕಾರ. ದೇಹ ಸುಟ್ಟ ನಂತರ ಸಿಗುವ ಭಸ್ಮ ದೇಹದ ನಶ್ವರತೆಯನ್ನು ಸೂಚಿಸುತ್ತದೆ. ಇದು ಅಹಂಕಾರದ ಅಳಿವಿನ ಸಂಕೇತವೂ ಹೌದು. ವಿಭೂತಿಯನ್ನು ಧರಿಸಲು ಅದರದೇ ಆದ ಕ್ರಮವಿದೆ.
ಮೂರು ಗೆರೆಗಳುಳ್ಳ ವಿಭೂತಿಯ ವಿಶೇಷತೆ ಹಲವಾರು. ಮೂರು ಎನ್ನುವ ಸಂಖ್ಯೆಯೇ ಇಲ್ಲಿ ವಿಶೇಷ. ಹಣೆಯ ಮೇಲೆ, ಮೈ ಮೇಲೆ ಧರಿಸುವ ಮೂರು ಗೆರೆಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಸತ್ವ ಗುಣ, ತಮೋ ಗುಣ, ರಜೋ ಗುಣವನ್ನೂ ಈ ಮೂರು ಗೆರೆಗಳು ಪ್ರತಿನಿಧಿತ್ತದೆ.
ವಿಭೂತಿಯ ಬಿಳಿ ಬಣ್ಣ ಪರಿಶುದ್ಧತೆ, ನಿರ್ಮಲ ಭಾವದ ಪ್ರತೀಕವೂ ಹೌದು.