ತಿರುವನಂತಪುರಂ: ಬಂಪರ್ ಲಾಟರಿ ಅಂದ್ರೆ ಇದೇ ನೋಡಿ. 11 ಜನ ಮಹಿಳಾ ಪೌರ ಕಾರ್ಮಿಕರು ಬರೋಬ್ಬರಿ 10 ಕೋಟಿ ರೂಪಾಯಿ ಬಹುಮಾನ ಗೆದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.
11 ಮಂದಿ ಮಹಿಳಾ ಕಾರ್ಮಿಕರಿಗೆ ಕೇರಳ ಸರ್ಕಾರದ ಮುಂಗಾರು ಬಂಪರ್ ಲಾಟರಿಯ 10 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಕೇರಳದ ಪರಪ್ಪನಂಗಡಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಮಹಿಳೆಯರ ತಂಡ ಹಣ ಒಟ್ಟುಗೂಡಿಸಿ 250 ರೂಪಾಯಿ ಲಾಟರಿ ಟಿಕೆಟ್ ಖರೀದಿಸಿತ್ತು. ಈ ಲಾಟರಿ ಟಿಕೆಟ್ ಗೆ ಈಗ ಬಂಪರ್ ಬಹುಮಾನ ಒಲಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು, ಈ ಹಿಂದೆಯೂ ನಾವು ಹಣ ಒಟ್ಟುಗೂಡಿಸಿ ಲಾಟರಿ ಟಿಕೆಟ್ ಖರೀದಿಸಿದ್ದೆವು 1000 ಬಹುಮಾನ ಸಿಕ್ಕಿತ್ತು. ಈಗ 10 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.
ಇನ್ನು ಲಾಟರಿ ಬಹುಮಾನದ ಮೊತ್ತದಲ್ಲಿ ಶೇ.35ರಷ್ಟು ಹಣ ಲಾಟರಿ ಏಜೆಂಟ್ ಕಂಪನಿಗೆ ಹಾಗೂ ತೆರಿಗೆ ಕಡಿತವಾಗಲಿದೆ ಎಂದು ತಿಳಿದುಬಂದಿದೆ.