ಡ್ರೋನ್ ಮೂಲಕ ಭಾರತಕ್ಕೆ ‘ಡ್ರಗ್ಸ್’ ರವಾನೆ; ಪಾಕ್ ಅಧಿಕಾರಿಯಿಂದ ಸ್ಪೋಟಕ ಹೇಳಿಕೆ

ನೆರೆ ರಾಷ್ಟ್ರ ಪಾಕಿಸ್ತಾನ, ಭಾರತದ ಜೊತೆ ಪದೇ ಪದೇ ಕ್ಯಾತೆ ತೆಗೆಯಲು ಯತ್ನಿಸುವುದು ಹೊಸ ವಿಷಯವೇನಲ್ಲ. ಜೊತೆಗೆ ಭಾರತದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಲು ಕುಟಿಲೋಪಾಯ ಮಾಡುತ್ತಿರುತ್ತದೆ. ಇದಕ್ಕಾಗಿ ಹಲವು ವಾಮ ಮಾರ್ಗಗಳನ್ನು ಹಿಡಿಯುತ್ತಿದ್ದು, ಇದಕ್ಕೆಲ್ಲಾ ಭಾರತ ತಕ್ಕ ಉತ್ತರ ನೀಡುತ್ತಲೇ ಬಂದಿದೆ.

ಆರ್ಥಿಕವಾಗಿ ಈಗಾಗಲೇ ಸಂಪೂರ್ಣ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾರಣಕ್ಕೆ ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ಛೀಮಾರಿಗೆ ಒಳಗಾಗಿದೆ. ಇಷ್ಟೆಲ್ಲಾ ಆದರೂ ಇನ್ನೂ ಬುದ್ಧಿ ಕಲಿಯದಂತಿರುವ ಪಾಕಿಸ್ತಾನದ ಕುತಂತ್ರ ಬುದ್ಧಿಯನ್ನು ಈಗ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರೇ ಬಹಿರಂಗಪಡಿಸಿದ್ದಾರೆ.

ಡ್ರೋನ್ ಮೂಲಕ ಮಾದಕ ದ್ರವ್ಯ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಭಾರತದೊಳಗೆ ಸಾಗಿಸಲು ಪಾಕಿಸ್ತಾನ ಸಹಕಾರ ನೀಡಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರ ರಕ್ಷಣಾ ವಿಭಾಗದ ವಿಶೇಷ ಸಹಾಯಕ ಅಧಿಕಾರಿ ಮಲ್ಲಿಕ್ ಮೊಹಮ್ಮದ್ ಅಹಮದ್ ಖಾನ್ ಅವರು ಟಿವಿ ಸಂದರ್ಶನ ಒಂದರಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read